Advertisement

ಪಶ್ಚಿಮ ಬಂಗಾಳ ಚುನಾವಣೆ: ಎಡಪಕ್ಷ –ಕಾಂಗ್ರೆಸ್‌ ಮೈತ್ರಿ ಗೇಮ್‌ಚೇಂಜರ್‌: ಚೌಧರಿ

12:52 PM Sep 14, 2020 | sudhir |

ಕೋಲ್ಕತಾ:“ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ನಡುವಿನ ಮೈತ್ರಿಯು ಗೇಮ್‌ಚೇಂಜರ್‌ ಆಗಲಿದ್ದು, ತೃಣಮೂಲ ಕಾಂಗ್ರೆಸ್‌ಗಾಗಲೀ, ಬಿಜೆಪಿಗಾಗಲೀ ಅಷ್ಟು ಸುಲಭದಲ್ಲಿ ಅಧಿಕಾರಕ್ಕೇರಲು ಬಿಡುವುದಿಲ್ಲ.’

Advertisement

ಹೀಗೆಂದು ಹೇಳಿರುವುದು ಇತ್ತೀಚೆಗಷ್ಟೇ ಪಶ್ಚಿಮ ಬಂಗಾಲದ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡಿರುವ, ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್‌ ರಂಜನ್‌ ಚೌಧರಿ. ಹಿಂದಿನಿಂದಲೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ವಿರೋಧಿಸುತ್ತಲೇ ಬಂದಿರುವ ಚೌಧರಿ, “ಬಿಜೆಪಿ ಮತ್ತು ಟಿಎಂಸಿ ಮತಗಳು ಹಂಚಿಹೋಗುವಂತೆ ಮಾಡುವುದು, ಜಾತ್ಯತೀತ ಮೌಲ್ಯ ಬೆಳೆಸುವುದೇ ಇದರ ಉದ್ದೇಶ’ ಎಂದಿದ್ದಾರೆ.

ಅತಂತ್ರ ವಿಧಾನಸಭೆಯ ಸ್ಥಿತಿ ನಿರ್ಮಾಣವಾದರೆ ಟಿಎಂಸಿಗೆ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಚೌಧರಿ, “ಅಗತ್ಯ ಬಂದಾಗ ಉತ್ತರ ಕೊಡು ತ್ತೇ ವೆ’ ಎಂದಿದ್ದಾರೆ. 1967ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದಲ್ಲಿ ಅತಂತ್ರ ವಿಧಾನಸಭೆಯ ಪರಿಸ್ಥಿತಿ ನಿರ್ಮಾಣವಾದಾಗ, ಬಾಂಗ್ಲಾ ಕಾಂಗ್ರೆಸ್‌ ಮತ್ತು ಸಿಪಿಎಂ ಕೈಜೋಡಿಸಿ ಸಮ್ಮಿಶ್ರ ಸರಕಾರ ರಚಿಸಿದ್ದವು.

ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಪ.ಬಂಗಾಲದ ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಮೃತದೇಹ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಟಿಎಂಸಿ ಕಾರ್ಯಕರ್ತರು ಮಾಡಿರುವ ಕೊಲೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next