Advertisement

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ : 7ನೇ ಹಂತದಲ್ಲಿ ಶೇ.75ರಷ್ಟು ಮತದಾನ

10:13 PM Apr 26, 2021 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ 7ನೇ ಹಂತದ ಮತದಾನ ಸೋಮವಾರ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.75.02ರಷ್ಟು ಮತದಾನ ದಾಖಲಾಗಿದೆ.

Advertisement

ಅಸನ್ಸೋಲ್‌, ರಾಶ್‌ ಬಹಾರಿ ಸೇರಿದಂತೆ ಕೆಲವು ಕಡೆ ಸಣ್ಣಪುಟ್ಟ ಘರ್ಷಣೆಗಳು, ಅಹಿತಕರ ಘಟನೆಗಳು ವರದಿಯಾಗಿವೆ.

7ನೇ ಹಂತದಲ್ಲಿ 36 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದ್ದು, ಇನ್ನು ಕೇವಲ ಒಂದು ಹಂತ ಮಾತ್ರ ಬಾಕಿಯಿದೆ.

ಏ.29ರಂದು ಅಂದರೆ ಗುರುವಾರ ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 2ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ :ಇವರ ಆಯುಷ್ಯ ಇನ್ನು 24 ಗಂಟೆಯಷ್ಟೇ’ ಎಂದಿದ್ದ ವೈದ್ಯರ ಭವಿಷ್ಯವನ್ನೇ ಸುಳ್ಳು ಮಾಡಿದ ಅಜ್ಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next