Advertisement

ವೆನ್ಲಾಕ್‌ ಆಸ್ಪತ್ರೆ: ಶೌಚಾಲಯದಲ್ಲಿ ಹೊಸ ಟ್ಯಾಪ್‌ ಅಳವಡಿಕೆ 

11:57 AM Dec 13, 2018 | Team Udayavani |

ಹಂಪನಕಟ್ಟೆ : ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿರುವ ಶೌಚಾಲಯದಲ್ಲಿ ನಾದುರಸ್ಥಿಯಲ್ಲಿದ್ದ ಟ್ಯಾಪ್‌ ಗಳನ್ನು ತೆಗೆದು ಹಾಕಿ ಹೊಸದಾಗಿ ಟ್ಯಾಪ್‌ ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇದರಲ್ಲಿ ನೀರಿನ ವ್ಯವಸ್ಥೆಯೂ ಸದ್ಯ ಸರಿಯಾಗಿದೆ.

Advertisement

ಆಸ್ಪತ್ರೆಯ ಓಪಿಡಿ ವಿಭಾಗದ ಶೌಚಾಲಯದಲ್ಲಿ ಫ್ಲಶ್‌ ಔಟ್‌ ವ್ಯವಸ್ಥೆ ಮುರಿದಿರುವ ಹಾಗೂ ನೀರಿನ ಟ್ಯಾಪ್‌ ಸರಿಯಾಗಿಲ್ಲದೆ ರೋಗಿಗಳು ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ‘ಉದಯವಾಣಿ-ಸುದಿನ’ವು ನ. 30ರಂದು ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಅನಂತರ ಎಚ್ಚೆತ್ತುಕೊಂಡ ಆಸ್ಪತ್ರೆಗೆ ಸಂಬಂಧಪಟ್ಟ ಅಧಿಕಾರಿಗಳು, ಹಳೆಯ ಟ್ಯಾಪ್‌ಗ್ಳನ್ನು ತೆಗೆದು ಹಾಕಿ ಹೊಸ ಟ್ಯಾಪ್‌ ಗಳನ್ನು ಅಳವಡಿಸಿದ್ದಾರೆ. ಆದರೆ ಮಹಿಳೆಯರ ಶೌಚಾಲಯದಲ್ಲಿರುವ ಮೂರು ಟ್ಯಾಪ್‌ಗಳ  ಪೈಕಿ ಎರಡು ಟ್ಯಾಪ್‌ ಗಳು  ದುರಸ್ತಿಯಾಗಿದ್ದು, ಒಂದು ಟ್ಯಾಪ್‌ನ್ನು ನೀರಿಗೆಂದು ತಿರುಗಿಸುವಾಗ ಮೊದಲಿನಂತೆಯೇ ತಿರುಗುತ್ತಿದೆ.

ಫ್ಲಶ್  ಔಟ್‌ ಸಮಸ್ಯೆ ಬಗೆಹರಿದಿಲ್ಲ 
ಈ ನಡುವೆ ಶೌಚಾಲಯದ ಫ್ಲಶ್ ಔಟ್‌ ವ್ಯವಸ್ಥೆಯು ನೀರು ಸಂಪರ್ಕಿಸುವ ಪೈಪ್‌ ನಿಂದ ಬೇರ್ಪಟ್ಟು ಕಬ್ಬಿಣದ ತುಂಡುಗಳು ಉಳಿದಿರುವ ಬಗ್ಗೆಯೂ ವರದಿಯಲ್ಲಿ ಗಮನ ಸೆಳೆಯಲಾಗಿತ್ತು. ಆದರೆ ಫ್ಲಶ್ ಔಟ್‌ ವ್ಯವಸ್ಥೆ ನಾದುರಸ್ತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next