Advertisement

ಅವಸಾನದಂಚಿನಲ್ಲಿ ನೀರಿನ ಬಾವಿ

09:04 AM Feb 18, 2019 | Team Udayavani |

ಹುನಗುಂದ: ಒಂದು ಕಾಲದಲ್ಲಿ ಇಡೀ ಗ್ರಾಮದ ಜನತೆಗೆ ನೀರಿನ ದಾಹ ಇಂಗಿಸುವ ಬಾವಿ (ಹೊಸ ಬಾವಿ) ಇದಾಗಿತ್ತು. ಆದರೆ, ಎಲ್ಲರ ನಿರ್ಲಕ್ಷ್ಯದಿಂದ ತ್ಯಾಜ್ಯ ಎಸೆಯುವ ಗುಂಡಿಯಾಗಿ ಪರಿಣಮಿಸಿದೆ.

Advertisement

ತಾಲೂಕಿನ ಕರಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಈ ಬಾವಿ 1939ರಲ್ಲಿ ಅಖಂಡ ವಿಜಯಪುರದ ಜಿಲ್ಲೆಯ ಸ್ವಾತಂತ್ರ್ಯ  ಹೋರಾಟಗಾರರ ಮುಂಚೂಣಿಯಲ್ಲಿದ್ದ ಶ್ರೀಮಂತ ವೀರಪ್ಪನವರು, ಧಿಧೀಮಂತ ಅಂಬಲಿ ಚನ್ನಬಸಪ್ಪನವರು, ಮುರನಾಳ ವಕೀಲರು, ಗುಡ್ಡದ ಪ್ರಾಣಾಚಾರ್ಯ, ಕಡಪಟ್ಟಿ ಸಿದ್ದಪ್ಪ ಇನ್ನು ಅನೇಕರು ಕೂಡಿ ತಮ್ಮ ಸ್ವಂತ ಹಣದಲ್ಲಿ ಕರಡಿ ಗ್ರಾಮದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂದು ಬಾವಿ ಕಟ್ಟಿಸಿದರು. ಅದು ಇಂದು ಅವಸಾನದ ಅಂಚಿನಲ್ಲಿ ಎದ್ದು ಕಾಣುತ್ತಿದೆ.

ಶತಮಾನ ಕಂಡ ಬಾವಿ ಇದಾಗಿದ್ದು, ಸುಮಾರು 55 ಅಡಿ ಆಳದ ಕಟ್ಟಡವಿರುವ ಬಾವಿ 20 ಅಡಿ ಆಳದ ನೀರು ಇರುವ ಸುಂದರವಾದ ವಸ್ತು ವಿನ್ಯಾಸ ಹೊಂದಿದೆ. ಬಾವಿಯಲ್ಲಿ ಪ್ಲಾಸ್ಟಿಕ್‌ ಹಾಳೆ, ಕೊಳೆತ ತೆಂಗಿನ ಕಾಯಿ, ಚಪ್ಪಲಿ, ಕಸ ಅನೇಕ ತ್ಯಾಜ್ಯಗಳು ಹಾಗೂ ಸತ್ತ ಪ್ರಾಣಿಗಳನ್ನು ಹಾಕಲಾಗುತ್ತಿದೆ ಇದರಿಂದ ನೀರು ದುರ್ವಾಸನೆ ಬರಲಾರಂಬಿಸಿದೆ.

ಸ್ಥಳೀಯವಾಗಿ ಗ್ರಾಮದಲ್ಲಿಯೇ ಗ್ರಾಮ ಪಂಚಾಯತ್‌ ಹೊಂದಿದರೂ ಸಹ ಅಲ್ಲಿಯ ಸಿಬ್ಬಂದಿ, ಆಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಅದರ ಹತ್ತಿರ ಕಣ್ಣೆತ್ತಿಯೂ ನೋಡದೆ ಇರುವುದು ವಿಪರ್ಯಾಸ ಸಂಗತಿಯಾಗಿದೆ ಎಂದು ಜನರು ಹಿಡಿಶಾಪ
ಹಾಕುತ್ತಿದ್ದಾರೆ. ಭೌತಿಕವಾಗಿ ಶತಮಾನಗಳ ಅಂಚಿನಲ್ಲಿರುವ ಇಂತಹ ಬಾವಿ ಜೀರ್ಣೋದ್ದಾರ ಮಾಡುವುದು, ಸ್ವಚ್ಛತೆ ಮಾಡಿ ಅದರಲ್ಲಿ ಯಾವುದೇ ಕಸ ಬೀಳದಂತೆ ರಕ್ಷಣಾ ತಂತಿ ಬೇಲಿ ಹಾಕಬೇಕು ಎಂದು ಮಲ್ಲು ಗಗ್ಗರಿ, ದಾವಲಸಾಬ ನಂದಿಹಾಳ, ರಾಘು ಸಾಹುಕಾರ ಬಯಕೆಯಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದ ಅನೇಕ ಬಾರಿ ಗ್ರಾಮ ಪಂಚಾಯತ ಪಿಡಿಒ ಹಾಗೂ ಸಿಬ್ಬಂದಿಗೆ ಮನವಿ ನೀಡಿದ್ದೇವೆ. ಆದರೂ ಕೂಡಾ ಬಾವಿಯ ಸ್ವಚ್ಚತೆ ಮಾಡಿಲ್ಲ. ಬಾವಿಯ ಹೆಸರಿನಲ್ಲಿ ಸ್ವಚ್ಚತೆ ಮಾಡಿದ್ದೇವೆ ಎಂದು ಬಿಲ್‌ ಪಡೆಯುತ್ತಿದ್ದಾರೆ. 
ಮಹಾಂತೇಶ ಗಗ್ಗರಿ, ಕರವೇ ಗ್ರಾಮ ಘಟಕದ ಅಧ್ಯಕ್ಷ್ಯ 

Advertisement

„ಮಲ್ಲಿಕಾರ್ಜುನ ಬಂಡರಗಲ್ಲ 

Advertisement

Udayavani is now on Telegram. Click here to join our channel and stay updated with the latest news.

Next