Advertisement

ವಿಶ್ವ ವಿಜೇತರಿಗೆ ವೀರೋಚಿತ ಸ್ವಾಗತ

06:00 AM Jul 18, 2018 | Team Udayavani |

ಪ್ಯಾರಿಸ್‌: ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಸಮರದಲ್ಲಿ ವಿಶ್ವವನ್ನೇ ಗೆದ್ದ ಫ್ರಾನ್ಸ್‌ ತಂಡದ ಸದಸ್ಯರು ತೆರೆದ ಬಸ್‌ನಲ್ಲಿ ರಾಜಧಾನಿಯ ಪ್ರಮುಖ ಕೇಂದ್ರ ಚಾಂಪ್ಸ್‌ ಎಲಿ ಸೀಸ್‌ಗೆ ಆಗಮಿಸಿದಾಗ ಸಾವಿರಾರು ಅಭಿಮಾನಿಗಳು ವೀರೋಚಿತವಾಗಿ ಸ್ವಾಗತಿಸಿದರು. ಟ್ರೋಫಿ ಹಿಡಿದು ಕೊಂಡು ಸಂಭ್ರಮಿಸುತ್ತಿದ್ದ ತಮ್ಮ ನೆಚ್ಚಿನ ಆಟಗಾರರನ್ನು ನೋಡುತ್ತಲೇ ಅಭಿಮಾನಿಗಳು ಕೂಡ ವಿಜಯೋತ್ಸವ ಆಚರಿಸಿದರು. ಕೋಚ್‌ ಮತ್ತು ಆಟಗಾರರ ಮೇಲ್ಗಡೆಯಿಂದ ಹಾರಿದ ಜೆಟ್‌ಗಳು ಫ್ರಾನ್ಸ್‌ ಧ್ವಜದ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ಹೊಗೆ ಉಗುಳುತ್ತ ಸಾಗಿದವು.

Advertisement

ದೇಶವೇ ಹೆಮ್ಮೆಪಡುವಂತಹ ಸಾಧನೆಗೈದದ್ದಕ್ಕೆ ಆಟಗಾರರಿಗೆ ಮ್ಯಾಕ್ರನ್‌ ಕೃತಜ್ಞತೆ ಸಲ್ಲಿಸಿದರು. ನೀವು ಎಲ್ಲಿಂದ ಬಂದಿದ್ದೀರಿ ಮತ್ತು ಫ್ರಾನ್ಸ್‌ನಾದ್ಯಂತ ಇರುವ ಕ್ಲಬ್‌ಗಳು ನೀಡಿರುವ ತರಬೇತಿಯನ್ನು ಎಂದಿಗೂ ಮರೆಯದಿರಿ ಎಂದು ಪ್ಯಾಲೇಸ್‌ ಗಾರ್ಡನ್ಸನಲ್ಲಿ ನಡೆದ ಔತಣಕೂಟದ ವೇಳೆ ತಿಳಿಸಿದರು.

ಔತಣಕೂಟಕ್ಕೆ ಸುಮಾರು 3 ಸಾವಿರ ಮಂದಿಗೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ದೇಶಾದ್ಯಂತದ ಫ‌ುಟ್‌ಬಾಲ್‌ ಕ್ಲಬ್‌ಗಳ ಒಂದು ಸಾವಿರ ಯುವ ಫ‌ುಟ್‌ಬಾಲ್‌ ಆಟಗಾರರು ಸೇರಿದ್ದರು. ಫೈನಲ್‌ನಲ್ಲಿ ಗೋಲು ಹೊಡೆದ ಕಿರಿಯ ಆಟಗಾರ ಎಂದೆನಿಸಿಕೊಂಡಿರುವ 19ರ ಹರೆಯದ ಕಿಲಿಯನ್‌ ಎಂಬಾಪೆ ಅವರು ಫ‌ುಟ್‌ಬಾಲ್‌ ಬಾಳ್ವೆ ಆರಂಭಿಸಿದ ಬಾಂಡಿ ಕ್ಲಬ್‌ನ ಯುವ ಆಟಗಾರರು ಔತಣಕೂಟದಲ್ಲಿ ಭಾಗವಹಿಸಿದ್ದರು. 

ಕೆಲವಡೆ ಹಿಂಸಾಚಾರ
ಪ್ಯಾರಿಸ್‌ನಾದ್ಯಂತ ಅಭಿಮಾನಿಗಳು ವಿಜಯೋತ್ಸವದಲ್ಲಿ ಮುಳುಗಿದರೆ ಕೆಲವು ನಗರಗಳಲ್ಲಿ ಹಿಂಸಾಚಾರವೂ ನಡೆದಿದೆ. ಪ್ಯಾರಿಸ್‌, ಲಿನ್‌, ಸ್ಟ್ರಾಸ್‌ಬರ್ಗ್‌ ಮತ್ತು ರೊಯಿನ್‌ನಲ್ಲಿ ನಡೆದ ಹಿಂಸಾಚಾರವನ್ನು ನಿಲ್ಲಿಸಲು ಪೊಲೀಸರು ಅಶ್ರುವಾಯು ಸಿಡಿಸ ಬೇಕಾಯಿತು. ಚಾಂಪ್ಸ್‌ ಎಲಿಸೀಸ್‌ ನಲ್ಲಿರುವ ಮದ್ಯದಂಗಡಿಗೆ ನುಗ್ಗಿದ ಯುವಕರು ಮದ್ಯ ಮತ್ತು ಶಾಂಪೇನ್‌ ಕದ್ದರು. ಇನ್ನೂ ಕೆಲವು ಕಡೆ ಮಹಿಳಾ ಅಭಿಮಾನಿಗಳಿಗೆ ಲೈಂಗಿಕ ಕಿರುಕುಳ ನೀಡಿದ ವರದಿಯಾಗಿದೆ. ಸಂಭ್ರಮಾಚರಣೆಯ ಆವೇಶದಲ್ಲಿ ಮಹಿಳಾ ಅಭಿಮಾನಿಗಳಿಗೆ ಬಲ ವಂತದಿಂದ ಕಿಸ್‌ ಮತ್ತು ಮೈಮುಟ್ಟಿದ ಘಟನೆ ನಡೆದಿದೆ.

ಅಧ್ಯಕ್ಷರ ಆತಿಥ್ಯ
ಫ್ರಾನ್ಸ್‌ ಫ‌ುಟ್‌ಬಾಲ್‌ ತಂಡದ ಸದಸ್ಯರಿಗೆ ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರನ್‌ ಅವರು ಅಧ್ಯಕ್ಷರ ಕಚೇರಿಯಲ್ಲಿ ಅಧಿಕೃತ ಔತಣಕೂಟ ಏರ್ಪಡಿ ಸಿದ್ದರು. ಈ ವೇಳೆ ಆಟಗಾರರಿಗೆ ದೇಶದ ಅತ್ಯುನ್ನತ ಗೌರವ ಲೀಗನ್‌ ಆಫ್ ಹಾನರ್‌ ಪ್ರಶಸ್ತಿ ನೀಡುವು ದನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಫ್ರಾನ್‌ನ ರಾಷ್ಟ್ರಗೀತೆ ಹಾಡುವ ವೇಳೆ ಆಟಗಾರರ ಜತೆ ಮಿಸ್ಟರ್‌ ಮ್ಯಾಕ್ರನ್‌ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಸೇರಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next