Advertisement

‘Welcome’: ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

08:04 PM Oct 10, 2024 | Team Udayavani |

ಹೊಸದಿಲ್ಲಿ: ಕೈಗಾರಿಕೋದ್ಯಮ ರಂಗದ ದಿಗ್ಗಜ ರತನ್ ಟಾಟಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಂಟು ಬಹಳಷ್ಟು ಗಾಢವಾದುದ್ದು, ಅವರ ನಡುವಿನ ಪರಸ್ಪರ ಗೌರವ ಎಷ್ಟರ ಮಟ್ಟಿಗೆ ಇತ್ತೆಂಬುದಕ್ಕೆ ಈ ಪ್ರಮುಖ ಘಟನೆಯೇ ಸಾಕ್ಷಿ. ವಿಶ್ವದ ಅತ್ಯಂತ ಅಗ್ಗದ ಕಾರು ಎಂದು ಬಿಂಬಿಸಲ್ಪಟ್ಟ ಇತಿಹಾಸದ ಪುಟದಲ್ಲಿ ದಾಖಲಾದ ಟಾಟಾ ನ್ಯಾನೋ ಯೋಜನೆಯನ್ನು 2008 ರಲ್ಲಿ ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಯಿತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ರತನ್ ಟಾಟಾ ಅವರಿಗೆ ಕಳುಹಿಸಿದ ಒಂದು ಪದದ SMS ಹೊಸ ಅಧ್ಯಾಯವನ್ನು ಪ್ರಾರಂಭಿಸಿತು.

Advertisement

2006 ರಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ, ಸಿಂಗೂರ್ ನಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಆಗಿನ ಆಡಳಿತಾರೂಢ ಎಡರಂಗ ಸರಕಾರದ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

ರತನ್ ಟಾಟಾ ಅವರು ಪಶ್ಚಿಮ ಬಂಗಾಳದಿಂದ ಟಾಟಾ ನ್ಯಾನೋ ಹೊರ ನಡೆಯುತ್ತಿರುವುದಾಗಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಭಾರವಾದ ಮನಸ್ಸಿನಲ್ಲಿ ಮಾತನಾಡುವ ವೇಳೆ ಮೋದಿ ಅವರು ಒಂದು SMS ಕಳುಹಿಸಿದ್ದರು. ಆ ಸಂದೇಶದಲ್ಲಿ ಕೇವಲ ”ಸ್ವಾಗತ” (welcome) ಎನ್ನುವುದು ಮಾತ್ರ ಬರೆಯಲಾಗಿತ್ತು.

1 ರೂಪಾಯಿಯ ಸಂದೇಶದಿಂದ ಏನೆಲ್ಲಾ ಮಾಡಬಹುದು ಎಂದು ನೀವು ಈಗ ಯೋಚಿಸಬಹುದು ಎಂದು 2010 ರಲ್ಲಿ ಸನಂದ್‌ನಲ್ಲಿ 2,000 ಕೋಟಿ ರೂ ಹೂಡಿಕೆಯಲ್ಲಿ ನಿರ್ಮಿಸಲಾದ ಟಾಟಾ ನ್ಯಾನೋ ಸ್ಥಾವರವನ್ನು ಉದ್ಘಾಟಿಸುವ ವೇಳೆ ಮೋದಿ ಹೇಳಿಕೆ ನೀಡಿದ್ದರು.

Advertisement

ನ್ಯಾನೋ ಯೋಜನೆಗೆ ಎಲ್ಲಾ ಸಹಾಯವನ್ನು ನೀಡಲು ಹಲವು ದೇಶಗಳು ಉತ್ಸುಕವಾಗಿದ್ದವು, ಆದರೆ ಗುಜರಾತ್ ಸರಕಾರ, ಅಲ್ಲಿನ ಅಧಿಕಾರಿಗಳು ಯೋಜನೆಯು ಭಾರತದಿಂದ ಹೊರಗೆ ಹೋಗದಂತೆ ನೋಡಿಕೊಂಡರು ಎಂದು ಮೋದಿ ಹೇಳಿದ್ದರು.

ಸಂತಾಪ ಸೂಚಿಸಿದ ಪ್ರಧಾನಿ
”ರತನ್ ಟಾಟಾ ಜಿ ಅವರು ದಾರ್ಶನಿಕ ಉದ್ದಿಮೆ ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಸ್ಥಿರ ನಾಯಕತ್ವವನ್ನು ಒದಗಿಸಿದರು. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಧನ್ಯವಾದಗಳು ಅವರು ಹಲವಾರು ಜನರನ್ನು ಪ್ರೀತಿಸುತ್ತಿದ್ದರು. ದೊಡ್ಡ ಕನಸು ಕಾಣುವ ಮತ್ತು ಮರಳಿ ಕೊಡುವ ಕಡೆಗೆ ಅವರ ಉತ್ಸಾಹ. ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ಪ್ರಾಣಿಗಳ ಕಲ್ಯಾಣ ಮುಂತಾದ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದರು” ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next