Advertisement

ಎವರೆಸ್ಟ್‌ ಶಿಖರ ಸಾಧಕ ವಿಕ್ರಮ್‌ಗೆ ಅದ್ಧೂರಿ ಸ್ವಾಗತ

11:52 AM May 26, 2018 | Team Udayavani |

ದೇವನಹಳ್ಳಿ: ಪ್ರಪಂಚದ ಅತ್ಯುನ್ನತ ಮೌಂಟ್‌ ಶಿಖರವನ್ನು ಏರುವ ಮೂಲಕ ಸಾಧನೆ ಮಾಡಿದ ಪ್ರಪ್ರಥಮವಾಗಿ ಕನ್ನಡದ ಧ್ವಜವನ್ನು ಸ್ಥಾಪಿಸಿದ ಏಕೈಕ ವ್ಯಕ್ತಿ ಅರಣ್ಯ ರಕ್ಷಕ ಸಿ.ವಿಕ್ರಮ್‌ ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

Advertisement

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ರಕ್ಷಕ ಸಿ.ವಿಕ್ರಮ್‌ ಬಹಳ ದಿನಗಳಿಂದ ಮೌಂಟ್‌ ಎವರೆಸ್ಟ್‌ ಹೇರುವ ಕನಸನ್ನು ಹೊತ್ತಿದ್ದರು. ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನವಳಿ ತಾಲೂಕಿನ ವಿಜಯಪುರ ಗ್ರಾಮದ ಚಂದ್ರನಾಯಕ್‌ರವರ ಪುತ್ರರಾಗಿದ್ದಾರೆ.

ಅರಣ್ಯ ರಕ್ಷಕ ಸಿ.ವಿಕ್ರಮ್‌ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮೌಂಟ್‌ ಎವರೆಸ್ಟ್‌ ಆರೋಹಣಕ್ಕೆ ಏ.18ರಂದು ನೇಪಾಳದ ಖಡ್ಮಂಡುವಿನ ಮೂಲಕ ಟಿಬೆಟ್‌ನ ಲಾಸಕ್ಕೆ ತೆರಳಿ ಅಲ್ಲಿಂದ ಮೌಂಟ್‌ ಎವರೆಸ್ಟ್‌ನ 8.850ಮೀ., 29035ಅಡಿ ಎತ್ತರ ನಾರ್ಥ್ ರೆಡ್ಡಿ ಪರ್ವತ ಪ್ರದೇಶದ ಮೂಲಕ ಚರಣ ಪ್ರಾರಂಭಿಸಿದರು.

ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಉಳಿದ ರಾಜ್ಯದ 25ಮಂದಿ ಮೌಂಟ್‌ಎವರೆಸ್ಟ್‌ ಆರೋಹಣಕ್ಕೆ ತಂಡವನ್ನು ರಚಿಸಿದ್ದರು. ಆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದ ಕಾರಣ 17ಜನ ವಾಪಾಸ್ಸು ಬಂದರು. ಅದರಲ್ಲಿ 8 ಜನ ಇದ್ದರು. ಅದರಲ್ಲಿ 4 ಜನ ಆರೋಹಣ ಹತ್ತುವುದರ ಮೂಲಕ ಇತಿಹಾಸವನ್ನು ನಿರ್ಮಿಸಿದೆವು ಎಂದು ಹೇಳಿದರು.

ಚಿಕ್ಕವಯಸ್ಸಿನಿಂದ ಮೌಂಟ್‌ ಎವರೆಸ್ಟ್‌ ಹತ್ತುವ ಅಭಿಲಾಷೆ ಇತ್ತು. ನಾನೇನಾದರು ಈ ಶಿಖರ ಹತ್ತಲು ಸಾಧ್ಯವಾಗಿದ್ದರೆ ಅದಕ್ಕೆ ಡಿಸಿಎಫ್ ಪ್ರಭಾಕರ್‌ ಅವರ ಪ್ರೇರೆಪಣೆಯಿಂದ ಮಾತ್ರ.ಹೈದರಾಬಾದಿನ ಟ್ರಾನ್ಸೆಂಟ್‌ ಆಡ್ವಂಚರ್‌ ಕ್ಲಬ್‌ ಮೂಲಕ ದೇಶದ ವಿವಿಧ ರಾಜ್ಯಗಳ 20 ಮಂದಿ ತಂಡದೊಂದಿಗೆ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಚರಣ ನಡೆಸಲು ತೆರಳಿದ್ದೆ. ಮೌಂಟ್‌ ಶಿಖರದ ಸಿಕ್ಕಿಂ ಎಂಬ ಪರ್ವತ ಪ್ರದೇಶದಲ್ಲಿ  2016-17ರಲ್ಲಿ ಚರಣ ತರಭೇತಿ ಪಡೆದುಕೊಳ್ಳಲಾಯಿತು ಎಂದರು. 

Advertisement

ಬೆಂಗಳೂರು ಗ್ರಾಮಾಂತರ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌ ಮಾತನಾಡಿ, ಎವರೆಸ್ಟ್‌ ಶಿಖರವನ್ನು ಯಶಸ್ವಿಯಾಗಿ ಚರಣ ಮಾಡಿರುವ ಅರಣ್ಯ ರಕ್ಷಕ ವಿಕ್ರಮ್‌ನ ಸಾಧನೆಯಿಂದ ಇಲಾಖೆಗೆ ಉತ್ತಮ ಹೆಸರು ಬಂದಿದೆ. ಇಂತಹ ಧೈರ್ಯ ಸಾಹಿಸಿಗಳು ಅತೀ ಕಡಿಮೆ, ಇಂತಹ ಪ್ರತಿಭೆಗಳನ್ನು ಪೋ›ಕೆಲಸವಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next