Advertisement

ಎಸಿಬಿ ತನಿಖೆಗೆ ಸೇವಾದಳ ಸಮಿತಿ ಸ್ವಾಗತ

01:26 PM Nov 07, 2017 | Team Udayavani |

ಬೆಂಗಳೂರು: ಭಾರತೀಯ ಸೇವಾದಳಕ್ಕೆ ದಾನವಾಗಿ ನೀಡಿದ್ದ ಜಮೀನನ್ನು ಸೇವಾದಳದ ಅಧಿಕಾರಿಗಳೇ ಕಾನೂನು ಮೀರಿ ಬೇರೆ ಟ್ರಸ್ಟ್‌ಗೆ ಪರೆಭಾರೆ ಮಾಡಿದ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಿರುವುದನ್ನು ಭಾರತೀಯ ಸೇವಾದಳ ಕೇಂದ್ರ ಕಾರ್ಯಕಾರಿ ಸಮಿತಿ ಸ್ವಾಗತಿಸಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಿಯ ಸದಸ್ಯೆ ಕಲ್ಪನಾ ಶಿವಣ್ಣ, ಈ ಹಿಂದೆ ಸೇವಾದಳದ ಮಾಜಿ ಅಧ್ಯಕ್ಷರಾಗಿದ್ದ ಡಾ,ಎಂ.ಸಿ.ಮೋದಿ ಅವರು ಸಂಸ್ಥೆಗೆ ಉಪಯೋಗವಾಗಲಿ ಎಂಬುವ ಕಾರಣಕ್ಕಾಗಿ ಎರಡುವರೆ ಎಕರೆ ಜಮೀನನ್ನು ದಾನವಾಗಿ ನೀಡಿದ್ದರು.

ಇಂದಿನ ಮಾರುಕಟ್ಟೆಯಲ್ಲಿ ಸುಮಾರು 70 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಈ ಜಮೀನನ್ನು ಸೇವಾದಳದ ಕೆಲವು ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಗಮನಕ್ಕೂ ತಾರದೆ  ಕಾನೂನು ಉಲ್ಲಂಘನೆ ಮಾಡಿ,ಬೇರೆ ಟ್ರಸ್ಟಿಗೆ  ಪರಭಾರೆ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ತನ್ವೀರ್‌ ಅವರಿಗೆ ದೂರು ನೀಡಲಾಗಿತ್ತು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಸರ್ಕಾರ, ಪ್ರಕರಣದ ತನಿಖೆಯನ್ನು ಭ್ರಷ್ಟಚಾರ ನಿಗ್ರಹ ದಳಕ್ಕೆ ವಹಿಸಿದೆ. ಈ ಹಿನ್ನಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next