Advertisement
ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳು, ಆಚಾರ – ವಿಚಾರ ಮತ್ತು ಆಹಾರ ಶೆ„ಲಿಯ ಬಗ್ಗೆ ಚಿತ್ರೀಕರಣದೊಂದಿಗೆ ಅಧ್ಯಯನ ನಡೆಸಿ, ಸಮಗ್ರ ಸಾಕ್ಷ್ಯ ಚಿತ್ರ ನಿರ್ಮಿಸುವ ಹಾಗೂ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮೂವರು ಯುವಕರ ತಂಡ ಸೆ. 15ರಂದು ರೈಡ್ ಟು ಮಿಡ್ಲ್ಯಾಂಡ್ ಯಾತ್ರೆಯನ್ನು ಕೈಗೊಂಡಿತ್ತು.
ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಮೂಲಕ 45 ದಿನಗಳ ಕಾಲ ನಡೆಸಲುದ್ದೇಶಿಸಿದ್ದ ರೈಡ್ ಟು ಮಿಡ್ಲ್ಯಾಂಡ್ ಎಂಬ ಹೆಸರಿನ ಸಾಹಸ ಯಾತ್ರೆಯು ಕೇವಲ 25 ದಿನಕ್ಕೇ ಪೂರ್ಣಗೊಂಡಿದ್ದು, ಹೆಚ್ಚುವರಿ 2,000 ಕಿಮೀ.ನೊಂದಿಗೆ 12 ಸಾವಿರ ಕಿ.ಮೀ. ಯಾತ್ರೆ ಪೂರ್ಣಗೊಳಿಸಿದ್ದಾರೆ. ಕಾಪು ಪೇಟೆಯಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಪುರಸಭಾ ಸದಸ್ಯ ಅನಿಲ್ ಕುಮಾರ್, ಕಾಪು ಎಎಸ್ಸೆ$ç ರಾಜೇಂದ್ರ ಮಣಿಯಾಣಿ, ಎಸ್‌ಕೆಪಿಎ ಕಾಪು ವಲಯಾಧ್ಯಕ್ಷ ವೀರೇಂದ್ರ ಪೂಜಾರಿ, ಕಾರ್ಯದರ್ಶಿ ಸಚಿನ್ ಉಚ್ಚಿಲ, ಕಾಪು ಪ್ರಸ್ ಕ್ಲಬ್ ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ, ಪ್ರಮುಖರಾದ ಸೂರಿ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ಪ್ರಭಾತ್ ಶೆಟ್ಟಿ, ಲವ ಕರ್ಕೇರ, ಮೋಹನ್ ಕಾಪು, ಯೋಗಿಶ್ ಪೂಜಾರಿ, ದಿವಾಕರ ಶೆಟ್ಟಿ ಮಲ್ಲಾರು ಉಪಸ್ಥಿತರಿದ್ದರು.