ಕಾರ್ಕಳ: ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಹೆಪ್ಟತ್ಲಾನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಾರ್ಕಳ ತಾ| ಕೆರ್ವಾಶೆ ಗ್ರಾಮದ ಅಕ್ಷತಾ ಪೂಜಾರಿ ಅವರನ್ನು ಹುಟ್ಟೂರಿನ ನಾಗರಿಕರಿಂದ ಅದ್ದೂರಿಯಾಗಿ ರವಿವಾರ ಸ್ವಾಗತಿಸಲಾಯಿತು.
ಬಂಗಾರ ಗೆದ್ದ ಅಕ್ಷತಾ ಅವರನ್ನು ನಗರದಲ್ಲಿ ತೆರೆದ ವಾಹನದಲ್ಲಿ ಕರೆದೊಯ್ದು ಮೆರವಣಿಗೆ ನಡೆಸಲಾಯಿತು. ವಿವಿಧ ವೇಷಧಾರಿಗಳು, ಬ್ಯಾಂಡ್ ವಾಲಗದ ಗದ್ದಲದ ನಡುವೆ ಅದ್ದೂರಿ ಸ್ವಾಗತ ಕೋರಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ ಕಾರಣಿಕ್ ವಿಜೇತೆ ಚಿನ್ನದ ಹುಡುಗಿಯನ್ನು ಸ್ವಾಗತಿಸಿ, ಅಭಿನಂದಿಸಿದರು. ಕಾರ್ಕಳ ನಗರಕ್ಕೆ ಆಗಮಿಸುತ್ತಿದ್ದಂತೆ ನಗರದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿ ಸ್ವಾಗತಿಸಲಾಯಿತು. ನಾಗರಿಕರು, ಬಿಜೆಪಿ ಪಕ್ಷದವರು, ಬಿಜೆಪಿ ಯುವ ಮೋರ್ಚಾದ ಮುಖಂಡರು ಬಸ್ ನಿಲ್ದಾಣ ಬಳಿ ಚಿನ್ನದ ಹುಡುಗಿಗೆ ಹಾರ ಹಾಕಿ ಪುಷ್ಪ ಗುಚ್ಚಗಳನ್ನು ನೀಡಿ ಅಭಿನಂದಿಸಿದರು.
ಇದನ್ನೂ ಓದಿ:ಉಸಿರು ಚೆಲ್ಲಿದೆ ಗಂಗೆ | ಸಕ್ರೆಬೈಲು ಬಿಡಾರದಲ್ಲಿ ಶೋಕ
ರಸ್ತೆ ಬದಿ ನಿಂತಿದ್ದ ಹಿರಿಯರು ಕಿರಿಯರು ಚಿನ್ನದ ಹುಡುಗಿಯ ಕೈ ಕುಲುಕಿ ಅಭಿನಂದಿಸಿದರು. ಈ ಸಂದರ್ಭ ಹೆತ್ತವರವಾದ ಕೆರ್ವಾಶೆಯ ಅಂಗು ಪೂಜಾರಿ, ಜಯಂತಿ ದಂಪತಿ ಜತೆಗಿದ್ದರು.