ಮಂಡ್ಯ: ತಾಲೂಕಿನ ಕೆರಗೋಡು, ದುದ್ದ, ಕಸಬಾ ಹಾಗೂ ಬಸರಾಳು ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದ ಪ್ರೌಢ ಶಾಲೆಗಳತ್ತ ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸಿದರೆ, ಶಿಕ್ಷಕರು ಹೂಮಳೆ ಸುರಿಸಿ ಸ್ವಾಗತಿಸಿದ್ದು ಗಮನ ಸೆಳೆಯಿತು.
ಕೋವಿಡ್ ಹಾವಳಿಯಿಂದಾಗಿ ಸುಮಾರು ಒಂದೂವರೆ ವರ್ಷಗಳಕಾಲಮನೆಯಲ್ಲೇಹೆಚ್ಚುಕಾಲ ಕಳೆದು ನೀರಸವಾಗಿದ್ದ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದುದು ವಿಶೇಷವಾಗಿತ್ತು. ಶಿಕ್ಷಣ ಇಲಾಖೆ ಆದೇಶದಂತೆ ಶಾಲೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಅಲಂಕಾರ ಮಾಡಿ, ಬಲೂನ್‌ಗಳನ್ನು ಹಾಕಿಸಿ ಶಾಲೆಯ ಸೌಂದರ್ಯ ಹೆಚ್ಚಿಸಿದ್ದರು. ಜತೆಗೆ
ಮುಂಭಾಗ ಸ್ಯಾನಿಟೈಸರ್ ಹಾಗೂಮಾಸ್ಕ್ ಗಳನ್ನು ಇಟ್ಟು ಸಾಮಾಜಿಕ ಅಂತರದೊಂದಿಗೆ ಆಗಮಿಸಿ ಎಂದು ಸೂಚಿಸಿ ಶಾಲೆಯ ಒಳ ಪ್ರವೇ
ಶಿಸುತ್ತಿದ್ದಂತೆಯೇ ಸಿಹಿ ಹಂಚಿ ಹೂಮಳೆಗರೆದು ವಿದ್ಯಾರ್ಥಿಗಳಿಗೆ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ:ಎಚ್.ಡಿ.ಕುಮಾರಸ್ವಾಮಿ ಇಲ್ಲದಿದ್ದರೆ ಸಾರಾ ಮಹೇಶ್ ಜೀರೋ: ಜಿ.ಟಿ ದೇವೇಗೌಡ ಟೀಕೆ
ಹಬ್ಬದ ವಾತಾವರಣ: ಶಿವಪುರ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಮಂಡ್ಯ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ಪ್ರತಿಕ್ರಿಯಿಸಿ, ಈ ದಿನ ನಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಹಾಜರಾಗಿದ್ದಾರೆ. ಶಿಕ್ಷಕರೂ ಕೋವಿಡ್ ಭಯ ಮುಕ್ತ ವಾತಾವರಣ ಸೃಷ್ಟಿಸಿ, ಕಲಿಕಾ ಸನ್ನಿವೇಶ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇ.70ಕ್ಕೂ ಹೆಚ್ಚು ಹಾಜರಾತಿ ಇದ್ದು, ಹಬ್ಬದ ವಾತಾವರಣ ಎಲ್ಲಾ ಶಾಲೆಗಳಲ್ಲೂ ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಶಿವಪುರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಸಂತ ಕುಮಾರ ಮಕ್ಕಳು ಹಾಗೂ ಪೋಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಶಾಲೆಯಲ್ಲಿ ಸುರಕ್ಷತಾ ವ್ಯವಸ್ಥೆ ಕುರಿತು ಮನನ ಮಾಡಿದ್ದೇವೆ.ಕಲಿಕಾ ವಾತಾವರಣದ ಬಗ್ಗೆಯೂ ಮನವರಿಕೆ ಮಾಡಿ ಕೊಡಲಾಗಿದೆ ಎಂದರು.
ಶಿವಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದಂದು ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಿ, ಸಿಹಿ ವಿತರಿಸಿ, ಹೂ ಹಾಕುವ ಮೂಲಕ ಸ್ವಾಗತಿಸಿದರು.