ಹೋರ್ಡಿಂಗ್‌ಗಳ ಮೂಲಕ ಆಹ್ವಾನಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿ, ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್
ಗಾಂಧಿಗೆ ಟ್ವೀಟ್‌ಗಳಲ್ಲಿ ಪ್ರಶ್ನೆ ಕೇಳುವ ಮೂಲಕ ತಿರುಗೇಟು ನೀಡಿದೆ.
Advertisement
“ಗೂಂಡಾ ಆಶೀರ್ವಾದ ಯಾತ್ರೆ’-“ವಿ ಇಂಪ್ಲಿಮೆಂಟೆಡ್ ಅವರ್ ಪ್ರಾಮಿಸಸ್’, “ಸೀಕಿಂಗ್ ಯುವರ್ ಬ್ಲೆಸಿಂಗ್ ಒನ್ಸ್ ಅಗೈನ್ ಫÅಮ್ ಗೂಂಡಾ ಆಫ್ ಕಾಂಗ್ರೆಸ್’ ಎಂದು ಜನಾಶೀರ್ವಾದ ಯಾತ್ರೆಯಲ್ಲಿ ಮನವಿ ಮಾಡುತ್ತಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅದೇ ರೀತಿ ಸಚಿವ ವಿನಯ್ ಕುಲಕರ್ಣಿ, ಮೊಹಮ್ಮದ್ ನಲಪಾಡ್ ಹಾಗೂ ಕೆ.ಆರ್. ಪುರಂ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ರಾಹುಲ್ ಗಾಂಧಿಗೆ ಸ್ವಾಗತ ಕೋರುವಂತಹ ಪೋಸ್ಟ್ ಹಾಕಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ “ಕನ್ನಡಿಗರು ನಿಮ್ಮಲ್ಲಿ ಕೆಲವು ಪ್ರಶ್ನೆ ಕೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
Related Articles
Advertisement
– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಳ್ವಿಕೆಯಲ್ಲಿ 3,500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸಚಿವ ಎಂ.ಬಿ.ಪಾಟೀಲ್ ಎಡವಿದ್ದಾರೆ. ಕೃಷಿಗೆ ಅನುದಾನದ ಹಂಚಿಕೆಯೂ ಸರಿಯಾಗಿ ಮಾಡಿಲ್ಲ. ಹಾಗಾದರೇ ಕರ್ನಾಟಕದ ಇತಿಹಾಸದಲ್ಲೇ ಕಾಂಗ್ರೆಸ್ ರೈತ ವಿರೋಧಿ ಸರ್ಕಾರವೇ?
– ಕಳೆದ ಐದು ವರ್ಷದಲ್ಲಿ 358 ದಲಿತರ ಹತ್ಯೆ, 801 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ 9 ಸಾವಿರ ದಲಿತರ ಮೇಲೆ ದೌಜ್ಯನ ನಡೆದಿರುವ ಪ್ರಕರಣ ದಾಖಲಾಗಿದೆ. ಇದು ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳುತ್ತಿರಾ?
ಪೊಳ್ಳು ಆಶ್ವಾಸನೆಗಳನ್ನು ಕೊಟ್ಟು ಅದನ್ನು ಪೂರೈಸದೆ ನಾಡಿನ ಜನತೆಗೆ ಕೈ ಕೊಟ್ಟ ಕೈ. ಹತ್ತು ಪರ್ಸೆಂಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಚುನಾವಣಾ ಹಿಂದು ರಾಹುಲ್ ಗಾಂಧಿಯವವರೆ ನಿಮ್ಮ ಸಾಧನೆಯನ್ನೊಮ್ಮೆ ನೋಡಿ, ಆತ್ಮ ಸಾಕ್ಷಿ ಇದ್ದರೆ ಜನತೆಗೆ ಉತ್ತರಿಸಿ.– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇವನಾರವ ಇವನಾರವ ಇವನಮ್ಮವ ಇವ ನಮ್ಮವ ಎಂಬ ಅಚ್ಚ ಕನ್ನಡದಲ್ಲಿರುವ ಬಸವಣ್ಣನವರ ವಚನವನ್ನು ಅಪಭ್ರಂಶ ಮಾಡಿ ಜಗಜ್ಯೋತಿ ಬಸವಣ್ಣನವರಿಗೆ, ಕನ್ನಡಿಗರಿಗೆ ಅಪಮಾನ ಮಾಡಿಸಿದ್ದು ಖಂಡನೀಯ ರಾಹುಲ್ ಗಾಂಧಿಯವರು ಹೋದಲ್ಲೆಲ್ಲ ಬಿಜೆಪಿಗೆ ಹೆಚ್ಚು ಸ್ಥಾನ ಯಾಕೆ ಬರುತ್ತದೆ ಎಂದು ಇಂದು ಅರ್ಥವಾಯಿತು.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ