Advertisement

ಪರ್ರಿಕರ್‌ಗೆ ಮೋದಿ ಬುಲಾವ್‌ ಸ್ವಾಗತಾರ್ಹ: ಎಂ.ಬಿ. ಪಾಟೀಲ

06:30 AM Jan 07, 2018 | Team Udayavani |

ವಿಜಯಪುರ: ಮಹದಾಯಿ ವಿವಾದ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅವರಿಗೆ ಬುಲಾವ್‌ ನೀಡಿರುವುದು ಸ್ವಾಗತಾರ್ಹ. ಕರ್ನಾಟಕ ಸರ್ಕಾರವನ್ನು ಆಹ್ವಾನಿಸಿಲ್ಲ ಎಂಬ ಯಾವುದೇ ಪ್ರತಿಷ್ಠೆ ನಮಗಿಲ್ಲ, ಸಮಸ್ಯೆಗೆ ಪರಿಹಾರ ದೊರೆತರೆ ಸಾಕು ಎಂದು ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ನದಿ ನೀರಿನ ವಿಷಯವಾಗಿ ಭಾನುವಾರ ಚರ್ಚಿಸಲು ಗೋವಾ ಸಿಎಂ ಪರ್ರಿಕರ್‌ ಅವರನ್ನು ಮೋದಿ ಕರೆದಿದ್ದು ಸಕಾರಾತ್ಮಕ ಫಲಿತಾಂಶ ನೀಡುವ ನಿರೀಕ್ಷೆ ಇದೆ. ಯಡಿಯೂರಪ್ಪ ಅವರಿಗೆ ಪತ್ರ ಬರೆದ ವಿಷಯದಲ್ಲೂ ನಮಗೆ ಬೇಸರವಿಲ್ಲ. ಈಗ ಪರ್ರಿಕರ್‌ ಅವರನ್ನು ಮಹದಾಯಿ ವಿಷಯವಾಗಿ ಚರ್ಚಿಸಲು ಕರೆದಾಗಲೂ ಆಕ್ಷೇಪವಿಲ್ಲ. ಸಮಸ್ಯೆಗೆ ಪರಿಹಾರ ದೊರೆತರೆ ಸಾಕು, ಈ ವಿಷಯದಲ್ಲಿ ನಮಗೆ ಯಾವುದೇ ಪ್ರತಿಷ್ಠೆಯಿಲ್ಲ. ಮಾತುಕತೆ ನಡೆಸಲು ಸ್ಥಳ, ಸಮಯ ನಿಗದಿ ಮಾಡುವಂತೆ ಪತ್ರ ಬರೆದವರೇ ನಾವು ಎಂದರು.

ಮಹದಾನಿ ನೀರು ಲಭ್ಯತೆ ಕುರಿತು ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಗೋವಾ ಸಿಎಂ ಮನೋಹರ ಪರೀಕ್ಕರ್‌ ಅವರು ಏನೇ ಮಾಡಿದರೂ ನ್ಯಾಯಾ ಧಿಕರಣದ ಮುಂದೆ ಗೋವಾದ ವಂಚನೆಯ ಮೊಂಡು ವಾದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಅಂತಿಮವಾಗಿ ನಮ್ಮ ಪಾಲಿನ ನೀರು ಪಡೆಯುವ ವಿಷಯದಲ್ಲಿ ಕಾನೂನು ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next