Advertisement

ಕೈದಿಗಳಾಗುವುದಿದ್ರೆ ಸ್ವಾಗತ!

07:00 AM Nov 29, 2017 | Harsha Rao |

ಕೈರೋ: ಭಾರತದಲ್ಲಿ ಯಾರಿಗಾದರೂ “ನಿನಗೆ ಜೈಲೂಟ ಗ್ಯಾರಂಟಿ’ ಅಂದ್ರೆ ಯಾರಾದ್ರೂ ಗಾಬರಿಗೊಳ್ತಾರೆ. ಆದರೆ, ಈಜಿಪ್ಟ್ನ ನೈಲ್‌ ಡೆಲ್ಟಾ ಸಿಟಿಯಲ್ಲಿ ಯಾರಿಗಾದರೂ ಹೀಗಂದ್ರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ! 

Advertisement

ಯಾಕಂದ್ರೆ, ಅಲ್ಲೊಂದು ವಿಶೇಷವಾದ ಜೈಲಿದೆ. ಯಾವುದೇ ತಪ್ಪು ಮಾಡದಿದ್ರೂ ನೀವು ಅಲ್ಲಿಗೆ ಹೋಗಬಹುದು. ಜೈಲು ಪ್ರವೇಶಿಸುತ್ತಲೇ ನಿಮ್ಮ ಕೈಗಳಿಗೆ ಬೇಡಿ ಹಾಕಿ, ನಿಮಗೊಂದು ಕೈದಿ ನಂಬರ್‌ ನೀಡಲಾಗುತ್ತದೆ. ಲಾಕಪ್‌ಗ್ಳಲ್ಲಿ ಬಂಧಿಸಲಾಗುತ್ತದೆ. ಸಿಬ್ಬಂದಿ ಕಡೆಯಿಂದ ಹೊಟ್ಟೆ ತುಂಬಾ ಊಟವನ್ನೂ ಹಾಕಲಾಗುತ್ತದೆ! 

ಇಂದೆಥಾ ಜೈಲು ಎಂಬ ಅಚ್ಚರಿಯೇ? ಇದು ಈಜಿಪ್ಟ್ನ ನೈಲ್‌ ಡೆಲ್ಟಾ ಸಿಟಿಯಲ್ಲಿರೋ “ಫ‌ುಡ್‌ ಕ್ರೈಂ’ ಎಂಬ ರೆಸ್ಟೋರೆಂಟ್‌ನ ಒಳನೋಟ. ಇದರ ಮಾಲೀಕ 37 ವರ್ಷದ ವಾಲೀದ್‌ ನಯೀಮ್‌. ಸಾಂಪ್ರದಾಯಿಕ ಹೋಟೆಲ್‌ ಶೈಲಿ ಬಿಟ್ಟು ಹೊಸ ರೀತಿಯ ಅನುಭೂತಿ ಕೊಡುವಂಥ ರೆಸ್ಟೋರೆಂಟ್‌ ಆರಂಭಿಸುವ ಅವರ ಹಂಬಲ ಈಗ “ಫ‌ುಡ್‌ ಕ್ರೈಂ’ ಆಗಿ ರೂಪುಗೊಂಡಿದೆ.  

ಆರಂಭದಲ್ಲಿ ಇಸ್ಲಾಂ ಬಲಪಂಥೀಯರಿಂದ ವಿರೋಧಕ್ಕೊಳಗಾದರೂ ಈಗ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಪ್ರವಾಸಿಗರಿಗೆ ಇದು ಹಾಟ್‌ ಫೇವರಿಟ್‌ ರೆಸ್ಟೋರೆಂಟ್‌. ಬೇಡಿ ಹಾಕಿಕೊಂಡು ಊಟ ಮಾಡುವುದು, ಕೈದಿ ನಂಬರ್‌ ಪಡೆದು ಲಾಕಪ್‌ಗ್ಳಲ್ಲಿ ಕೂತು ತಿನ್ನುವುದು ಸೇರಿದಂತೆ ಇಲ್ಲಿರುವ ಡೆಡ್ಲಿ ಎಲೆಕ್ಟ್ರಿಕ್‌ ಕುರ್ಚಿ ಮೇಲೆ ಸೆಲ್ಫಿ ತೆಗೆದು ಕೊಳ್ಳುವುದು ಗ್ರಾಹಕರಿಗೆ ಮಜಾ ಕೊಡುತ್ತಿದೆ. ಈಜಿಪ್ಟ್ ಪ್ರವಾಸಕ್ಕೆ ಹೋದವರು ಇಲ್ಲಿಗೊಮ್ಮೆ ಭೇಟಿ ನೀಡಿ ಕೈದಿಗಳಾಗಬಹುದು!

Advertisement

Udayavani is now on Telegram. Click here to join our channel and stay updated with the latest news.

Next