Advertisement

ಜೆಡಿಎಸ್‌ ಅಭ್ಯರ್ಥಿಗೆ 300 ಕೆಜಿ ಸೇಬು ಹಾರದ ಸ್ವಾಗತ

05:06 PM May 06, 2018 | Team Udayavani |

ಶ್ರೀರಂಗಪಟ್ಟಣ: ಜೆಡಿಎಸ್‌ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರು ಸ್ವಗ್ರಾಮ ಅರಕೆರೆ ಗ್ರಾಮದಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಅವರ ಅಭಿ ಮಾನಿಗಳು ಕ್ರೇನ್‌ ಮೂಲಕ ಸುಮಾರು 300 ಕೆಜಿ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತ ನೀಡಿದರು.

Advertisement

ಗ್ರಾಮದ ಮನೆ ಮನೆಗೆ ತಮ್ಮ ಬೆಂಬಲಿಗ ರೊಂದಿಗೆ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಮತ ಯಾಚನೆ ಮಾಡಿದರು. ನಂತರ ಮಾತ ನಾಡಿ, ಮತದಾರರು ನಮ್ಮ ಕುಟುಂಬದ ಮೇಲೆ ಭರವಸೆ ಇಟ್ಟು ನಮ್ಮ ತಾಯಿ ಪಾರ್ವತಮ್ಮ ಶ್ರೀಕಂಠಯ್ಯ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಆ ವೇಳೆ ಅವರ ಶಾಸಕ ಸ್ಥಾನದ ಅವಧಿಯಲ್ಲಿ 250 ಕೋಟಿ ರೂ.ಗಿಂತ ಅಧಿಕ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಪಡಿಸಿದ್ದಾರೆ. 13 ಸಾವಿರದ 500 ಆಶ್ರಯ ಮನೆಗಳ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ರಸ್ತೆ, ಬಡಾವಣೆಗಳ ನಿರ್ಮಾಣ, ರೈತರಿಗೆ ಕಾವೇರಿ ನದಿಯಲ್ಲಿ ದಾಟಲು ಅನುಕೂಲಕ್ಕೆ ಬಲಮುರಿ ಹಾಗೂ ಕರಿಘಟ್ಟದ ಬಳಿ
ನದಿಗೆ ಸೇತುವೆ ನಿರ್ಮಾಣ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ತಂದಿದ್ದಾರೆ ಎಂದರು.

ಕುಮಾರಸ್ವಾಮಿ ಅವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಬೇಕು ಎಂಬುದು ಪ್ರತಿಯೊಬ್ಬ ಮತದಾರನ ಇಚ್ಛೆಯಾಗಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಅಲೆ ಇದ್ದು, ಕ್ಷೇತ್ರದಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಮತಯಾಚನೆ ಮಾಡಲು ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಎಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ಹಾಗೂ ರವೀಂದ್ರ ಶ್ರೀಂಕಠಯ್ಯ ಅವರ ಪರ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್‌, ತಾಲೂಕು ಅಧ್ಯಕ್ಷ ಪೈಲ್ವಾನ್‌ ಮುಕುಂದ, ಮುಖಂಡರಾದ ಸುರೇಶ್‌, ಅರಕೆರೆ ಮರೀಗೌಡ, ನಾಗೇಶ್‌ ಸೇರಿದಂತೆ ಸಾವಿರಾರು ಬೆಂಬಲಿಗರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ನೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next