Advertisement

ಬಲವಂತದ ಮದುವೆ; ಪಾಕ್ ನಿಂದ ಭಾರತಕ್ಕೆ ಮರಳಿದ ಉಜ್ಮಾ, ತಾಯ್ನಾಡಿಗೆ ನಮನ

01:44 PM May 25, 2017 | Team Udayavani |

ನವದೆಹಲಿ: ಪಾಕಿಸ್ತಾನದಲ್ಲಿ ಬಲವಂತವಾಗಿ ವಿವಾಹ ಬಂಧನಕ್ಕೊಳಗಾಗಿದ್ದ ಭಾರತೀಯ ಮಹಿಳೆ ಉಜ್ಮಾ ಗುರುವಾರ ಬೆಳಗ್ಗೆ ವಾಘಾ ಗಡಿ ದಾಟಿ ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಭೂಮಿಗೆ ಕೈಯನ್ನು ಸ್ಪರ್ಶಿಸುವ ಮೂಲಕ ನಮನ ಸಲ್ಲಿಸಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇಂದು ಸಂಜೆ ಉಸ್ಮಾ ದೆಹಲಿಗೆ ಆಗಮಿಸಿ ಮನೆಗೆ ತೆರಳಲಿದ್ದಾರೆ ಎಂದು ವರದಿ ವಿವರಿಸಿದೆ.

Advertisement

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮೂಲಕ ಉಜ್ಮಾ ಅವರನ್ನು ಸ್ವಾಗತಿಸಿದ್ದು, ಭಾರತದ ಮಗಳು ಎಂದು ಹೇಳಿದ್ದಾರೆ. ನಿಮಗಾಗಿರುವ ತೊಂದರೆಗೆ ಬಗ್ಗೆ ನನಗೆ ಬೇಸರವಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ಹೋಗಲು ಅನುವು ಮಾಡಿ ಎಂದು ಪಾಕಿಸ್ತಾನದ ಭಾರತೀಯ ಹೈಕಮಿಷನರ್‌ ಕಚೇರಿ ಯಲ್ಲೇ ಆಶ್ರಯ ಪಡೆದಿದ್ದ ದೆಹಲಿ ಮಹಿಳೆ ಉಜ್ಮಾಗೆ ತವರಿಗೆ ಮರಳಲು ಇಲ್ಲಿನ ಹೈಕೋರ್ಟ್‌ ಅನುಮತಿ ನೀಡಿತ್ತು. ಜೊತೆಗೆ ವಾಘಾ ಗಡಿವರೆಗೂ ಅವರಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸಿತ್ತು. 

ರಜೆಯ ಹಿನ್ನೆಲೆಯಲ್ಲಿ ಉಜ್ಮಾ ಮೆ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದಳು ಮೇ 3 ರಂದು ಪಾಕಿಸ್ತಾನದ ತಾಹಿರ್‌ ಅಲಿ ಇವರನ್ನು ವಿವಾಹವಾಗಿದ್ದರು.  ಆದರೆ ತಾಹಿರ್‌ ಬಂದೂಕು ತೋರಿಸಿ ಮದುವೆಯಾದರು ಎಂದು ಉಸ್ಮಾ ಆರೋಪಿಸಿದ್ದರು. ಜೊತೆಗೆ ಭಾರತ ದಲ್ಲಿರುವ ತನ್ನ ಮಗು ಥಾಲಸ್ಸೇಮಿಯಾ ಎಂಬ ಖಾಯಿಲೆ ಯಿಂದ ಬಳಲುತ್ತಿದೆ. ಮಗುವಿಗೆ ನನ್ನ ಅಗತ್ಯವಿರುವುದರಿಂದ ನನಗೆ ಭಾರತಕ್ಕೆ ಮರಳಲು ಅನುಮತಿ ನೀಡಿಎಂದು ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಕೋರ್ಟ್ ಉಜ್ಮಾ ಪರವಾಗಿ ತೀರ್ಪು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next