Advertisement

ದಿಂಡಿ ಪಲ್ಲಕ್ಕಿಗೆ ಭವ್ಯ ಸ್ವಾಗತ

05:36 PM May 17, 2018 | |

ಉಪ್ಪಿನಬೆಟಗೇರಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಮೇ 23ರಿಂದ ಮೂರು ದಿನ
ಕಾಲ ಜರುಗುವ ಶ್ರೀ ಮಾಧವಾನಂದ ಪ್ರಭುಜಿಯವರ ಪುಣ್ಯತಿಥಿ ಸಪ್ತಾಹದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಇಂಚಗೇರಿ ಮಠಕ್ಕೆ ತೆರಳುತ್ತಿರುವ ದಿಂಡಿ ಪಲ್ಲಕ್ಕಿ ಹಾಗೂ ನಂದಿಕೋಲು ಹೊತ್ತ ಪಾದಯಾತ್ರಿಕರು ಮಂಗಳವಾರ ಮಾರ್ಗಮಧ್ಯೆ ಗ್ರಾಮಕ್ಕೆ ಆಗಮಿಸಿದಾಗ ಭಕ್ತರು ಭವ್ಯ ಸ್ವಾಗತ ಕೋರಿದರು.

Advertisement

ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮಠದ ಶಿಷ್ಯ ಶಂಕ್ರಪ್ಪ ಕೌಜಲಗಿ ಮಹಾರಾಜರು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮಾಧವಾನಂದರ ಸಪ್ತಾಹದಲ್ಲಿ ಪಾಲ್ಗೊಳ್ಳಲು ಸುಮಾರು 80 ಜನರು ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಇಂಚಗೇರಿಗೆ ತೆರಳುತ್ತಿದ್ದು, ವರ್ಷದಲ್ಲಿ ಮೂರು ಬಾರಿ ಇಲ್ಲಿಗೆ ಆಗಮಿಸಿ ಭಕ್ತರಾದ ಶಂಕರ ಓರಣಕರ ಅವರ ಮನೆಯಲ್ಲಿ ಅಲ್ಪಉಪಹಾರ ಸ್ವೀಕರಿಸಿ ತೆರಳುವ ಪದ್ಧತಿ ಇದೆ ಎಂದರು. ಶಿವಪ್ರಭು ಈಸರಗೊಂಡ, ಫಕ್ಕೀರಪ್ಪ ಸವಣೂರ, ಡಿ.ಐ. ನದಾಫ, ಕಲ್ಮೇಶ ಯಲಿಗಾರ, ಶಿಕ್ಷಕ ಎಫ್‌.ವೈ. ಮಡಿವಾಳರ, ಮಹಾದೇವ ನರಗುಂದ, ವಿನೋಬಾ ಓರಣಕರ, ಮಹಮ್ಮದಅಸ್ಲಂ ಮುಲ್ಲಾ, ರಮೇಶ ಓರಣಕರ, ಶಿವನಪ್ಪ ಬೆಳ್ಳಿಗಟ್ಟಿ, ರವೀಂದ್ರ ಓರಣಕರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next