ಹೊಸದಿಲ್ಲಿ: ಡೋಪಿಂಗ್ ಪ್ರಕ ರಣದಿಂದ ಮುಕ್ತ ಗೊಂಡ ವೇಟ್‌ಲಿಫ್ಟರ್ ಸಂಜಿತಾ ಚಾನು ಈ ವರ್ಷ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಭಾಜನರಾಗುವುದು ಖಾತ್ರಿಯಾಗಿದೆ. ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶ ದಂತೆ ಅವರನ್ನು ಈ ಪ್ರಶಸ್ತಿಗೆ ಪರಿಗಣಿ ಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.
2016ರಿಂದಲೂ ಸಂಜಿತಾ ಚಾನು ಅರ್ಜುನ ಪ್ರಶಸ್ತಿಗಾಗಿ ಪ್ರಯತ್ನಿಸುತ್ತಲೇ ಇದ್ದರು. ಅಂದು ಕಡೆ ಗಣಿಸಿದಾಗ ಸಂಜಿತಾ ದಿಲ್ಲಿ ಉಚ್ಚ ನ್ಯಾಯಾಯಲದ ಮೊರೆ ಹೋಗಿದ್ದರು. ಆದರೆ ಮರು ವರ್ಷವೇ ಅವರು ಡೋಪಿಂಗ್ ಪ್ರಕ ರಣದಲ್ಲಿ ಸಿಕ್ಕಿ ಬಿದ್ದರು. ಹೀಗಾಗಿ ತೀರ್ಪನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಕಾದಿರಿಸಲಾಗಿತ್ತು. ಇತ್ತೀಚೆಗಷ್ಟೇ ಈ ಆರೋಪದಿಂದ ಮುಕ್ತರಾಗಿದ್ದರು. ಹೀಗಾಗಿ ಅವರ ಅರ್ಜುನ ಪ್ರಶಸ್ತಿಯ ಹಾದಿ ಸುಗಮಗೊಂಡಿತ್ತು.
“ಸಂಜಿತಾ ಚಾನು ಈಗ ಡೋಪಿಂಗ್ ಪ್ರಕರಣದಿಂದ ಮುಕ್ತರಾಗಿದ್ದಾರೆ.ದಿಲ್ಲಿ ಹೈಕೋರ್ಟ್ ಆದೇಶದಂತೆ ಅವರನ್ನು ಈ ಬಾರಿ ಪ್ರಶಸ್ತಿಗೆ ಪರಿಗಣಿಸುತ್ತೇವೆ’ ಎಂದು ಕ್ರೀಡಾ ಸಚಿವಾಲಯದ ಮೂಲವೊಂದು ತಿಳಿಸಿದೆ.
26 ವರ್ಷದ ಸಂಜಿತಾ ಚಾನು 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದು ಮಿಂಚಿದ್ದರು.