Advertisement

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ: ಬೆಳ್ಳಿ ಗೆದ್ದ ಮಿರಾಬಾಯ್ ಚಾನು

12:28 PM Jul 24, 2021 | Team Udayavani |

ಟೋಕಿಯೊ: ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ಭಾರತ ಪದಕ ಬಾಚಿಗೊಂಡಿದೆ. 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ  ಮಿರಾಬಾಯ್ ಚಾನು ಬೆಳ್ಳಿ ಪದಕ ಪಡೆದಿದ್ದಾರೆ.

Advertisement

ಚೀನಾದ ಜೀಹೂಹು ಮೊದಲ ಸ್ಥಾನ ಪಡೆದರು. 84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು.

ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ನ ಮೊದಲ ಬಂಗಾರಕ್ಕೆ ಗುರಿಯಿಟ್ಟ ಚೀನಾದ ಶೂಟರ್

ಇದು ಒಲಿಂಪಿಕ್ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಅವರು 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next