Advertisement

ದೇಹದ ತೂಕ ಇಳಿಸಿ; ಬೆಳ್ಳುಳ್ಳಿ ಜೇನುತುಪ್ಪ ಸೇವಿಸಿ

11:48 AM Nov 11, 2020 | Nagendra Trasi |

ಅಡುಗೆ ಮನೆಯಲ್ಲಿರುವ ಕೆಲವು ಸಾಮಗ್ರಿಗಳು ಆಹಾರ ರುಚಿ ಹೆಚ್ಚಿಸುವುದು ಮಾತ್ರವಲ್ಲ ಅವುಗಳಲ್ಲಿರುವ ಔಷಧೀಯ ಗುಣಗಳು ದೇಹಾರೋಗ್ಯವನ್ನೂ ಕಾಪಾಡುತ್ತದೆ. ಮುಖ್ಯವಾಗಿ ಬೆಳ್ಳುಳ್ಳಿಗೆ ಹಲವು ಕಾಯಿಲೆಗಳನ್ನು ದೂರಮಾಡುವ ಗುಣವಿದೆ.

Advertisement

ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತನಾಳಗಳನ್ನು ಸಡಿಲಗೊಳಿಸಿ, ಅಪಧಮನಿಗಳ ಮೂಲಕ ಸುಗಮ ರಕ್ತ ಸಂಚಾರಕ್ಕೆ ನೆರವಾಗುತ್ತದೆ. ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಉರಿಯೂತದ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಅಲ್ಲದೇ ದೇಹದ ತೂಕ ಇಳಿಸಲೂ ಬೆಳ್ಳುಳ್ಳಿ ಪರಿಣಾಮಕಾರಿ.

ಬೆಳ್ಳುಳ್ಳಿಯಲ್ಲಿ ವಿಟಮಿನ್‌ ಬಿ6, ಸಿ, ನಾರಿನಾಂಶ, ಮ್ಯಾಂಗನೀಸ್‌, ಕ್ಯಾಲ್ಸಿಯಂ ಸಹಿತ ಅನೇಕ  ಪೋಷಕಾಂಶಗಳನ್ನೂ ಹೊಂದಿವೆ. ವಿಶೇಷವಾಗಿ ದೇಹದ ಕೊಬ್ಬು ಕರಗಿಸುವ ಗುಣ ಬೆಳ್ಳುಳ್ಳಿಗೆ ಇದೆ. ದೇಹದ ಕೊಬ್ಬು ಕರಗಿಸಲು ಬೆಳಗ್ಗೆ ಎದ್ದ ತತ್‌ಕ್ಷಣ ಬೆಚ್ಚಗಿನ ನೀರು ಕುಡಿಯುವುದು, ನಿಂಬೆ, ಜೇನುತುಪ್ಪ ಸೇವಿಸುವುದು ಕೂಡ
ಪರಿಣಾಮಕಾರಿಯಾಗಿದ್ದರೂ ಬೆಳ್ಳುಳ್ಳಿ ಹೆಚ್ಚು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ.

ಒಂದೆರಡು ಹಸಿ ಬೆಳ್ಳುಳ್ಳಿ ಎಸಳು ಮತ್ತು ಸ್ವಲ್ಪ ಜೇನುತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ನಿರಂತರ ಸೇವಿಸುತ್ತ ಬಂದರೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಸುಧಾರಣೆಯಾಗುವುದು. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ದೇಹದ ತೂಕ ಶೀಘ್ರದಲ್ಲಿ ಡಿಮೆಯಾಗುವುದು. ಇದೊಂದು ಪ್ರಬಲ ಟಾನಿಕ್‌ ನಂತೆ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.

ಜೇನು ಹಸಿವನ್ನು ನಿಯಂತ್ರಿಸಿ ಅನಗತ್ಯ ಆಹಾರ ಸೇವನೆಯನ್ನು ತಡೆಯುತ್ತದೆ. ಜತೆಗೆ ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಯಾರಿಸುವ ವಿಧಾನ ಕೆಲವು ಎಸಳು ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಒಂದು ಬಾಟಲಿಗೆ ಹಾಕಿ. ಬೆಳ್ಳುಳ್ಳಿ ಸಂಪೂರ್ಣ ಮುಳುಗುವಷ್ಟು ಜೇನುತುಪ್ಪ ಸೇರಿಸಿ. ಭದ್ರವಾಗಿ ಮುಚ್ಚಳ ಹಾಕಿ ತಿಂಗಳವರೆಗೆ ಇರಿಸಿ.

Advertisement

ಅನಂತರ ದಿನ ಬೆಳಗ್ಗೆ ಒಂದೆರಡು ಬೆಳ್ಳುಳ್ಳಿ ಎಸಳನ್ನು ತೆಗೆದು ಜಜ್ಜಿ ಖಾಲಿ ಹೊಟ್ಟೆಗೆ ಸೇವಿಸಿದರೆ ಪರಿಣಾಮಕಾರಿಯಾಗುವುದು. ಇದನ್ನು ಯಾರು ಬೇಕಾದರೂ
ಸೇವಿಸಬಹುದು. ಆದರೆ ಅಸ್ತಮಾ ಇರುವವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ. ಯಾಕೆಂದರೆ ಬೆಳ್ಳುಳ್ಳಿ ಅಸ್ತಮಾ ಇರುವವರಿಗೆ ಒಳ್ಳೆಯದಲ್ಲ. ಅಲ್ಲದೇ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಗಾಗುವ ಮೊದಲು ಇದನ್ನು ಸೇವಿಸಬಾರದು.

Advertisement

Udayavani is now on Telegram. Click here to join our channel and stay updated with the latest news.

Next