Advertisement

ಪ್ರತಿವಾರ ರಾಜಕೀಯ ಮುಖಂಡರ ಸಭೆ

10:44 AM Dec 17, 2022 | Team Udayavani |

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾಹಿತಿ ಯನ್ನು ರಾಜಕೀಯ ಪಕ್ಷಗಳಿಗೆ ನೀಡುವ ಉದ್ದೇಶದಿಂದ ಪ್ರತಿ ವಿಧಾನಸಭಾ ಕ್ಷೇತ್ರವಾರು ವಾರಕ್ಕೊಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ವಾರಕ್ಕೊಮ್ಮೆ ಮತದಾರ ಪಟ್ಟಿ ಪರಿಷ್ಕರಣೆ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಬೆಂಗಳೂರು ನಗರ ಜಿಲ್ಲೆ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ಆದೇಶದ ಮೇರೆಗೆ ಕೆಲ ಬಿಎಲ್‌ಒಗಳನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಜತೆಗೆ ಅಗತ್ಯಕ್ಕೆ ಅನುಗುಣ ವಾಗಿ ಹೊಸ ಬಿಎಲ್‌ಒಗಳನ್ನು ನೇಮಿಸಲಾಗಿದೆ. ಬಿಎಲ್‌ಒಗಳ ಹೆಸರು, ದೂರವಾಣಿ ಸಂಖ್ಯೆ ಸೇರಿ ಸಂಪೂರ್ಣ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ, ರಾಜಕೀಯ ಪಕ್ಷದ ಸದಸ್ಯರಿಗೆ ಬಿಎಲ್‌ಒಗಳ ಮಾಹಿತಿ ಸಮರ್ಪಕವಾಗಿ ದೊರೆಯಲಿದೆ ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಿವಾಜಿ ನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಉಳಿದ 25 ಕ್ಷೇತ್ರಗಳ ಪರಿಷ್ಕರಣೆ ಪರಿಶೀಲನೆಗೆ 12 ಕೆಎಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಮತದಾರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾಕಷ್ಟು ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗ ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯನ್ನು ವಿಶೇಷ ಪರಿಶೀಲನೆಗೆ ಸೂಚಿಸಿತ್ತು. ಅದಕ್ಕಾಗಿ ಮೂವರು ಐಎಎಸ್‌ ಅಧಿಕಾರಿಗಳನ್ನು ವಿಶೇಷಾಧಿ ಕಾರಿಗಳನ್ನಾಗಿ ನೇಮಿಸಿದೆ. ಅದೇ ಮಾದರಿಯಲ್ಲಿ ಬೆಂಗಳೂರು ನಗರ ಹಿಲ್ಲೆ ವ್ಯಾಪ್ತಿಯ ಉಳಿದ 25 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿ ಷ್ಕರಣೆಗೆ 12 ಕೆಎಎಸ್‌ ಅಧಿಕಾರಿಯನ್ನು ನೇಮಿಸಲಾಗಿದೆ. 2022ರ ಜನವರಿಯಿಂದ ಈವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕಿರುವ ಪ್ರಕ್ರಿಯೆಯನ್ನು ಪರಿಶೀಲಿಸಲಾ ಗುತ್ತದೆ ಎಂದು ತಿಳಿಸಿದರು.

ಡಿ.24ಕ್ಕೆ ವರದಿ: ಕೇಂದ್ರ ಚುನಾವಣಾ ಆಯೋಗ ವಿಶೇಷ ಪರಿಶೀಲನೆಗೆ ನೇಮಿಸಿದ ಅಧಿಕಾರಿಗಳು ಡಿ.24ಕ್ಕೆ ಚಿಕ್ಕಪೇಟೆ, ಶಿವಾಜಿನಗರ ಮತ್ತು ಮಹ ದೇವಪುರಕ್ಕೆ ಸಂಬಂಧಿಸಿದಂತೆ ವರದಿ ನೀಡಲಿ ದ್ದಾರೆ. ಉಳಿದ 25 ಕ್ಷೇತ್ರಗಳ ವರದಿಯೂ ಅಷ್ಟ ರೊಳಗೆ ಸಲ್ಲಿಕೆಯಾಗಲಿವೆ. ಅದಾದ ನಂತರ ಮತ ದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಗಿರುವ ಸಮಸ್ಯೆಗಳು ಬಹಿರಂಗವಾಗಲಿದೆ. ಜತೆಗೆ ಮತದಾರರ ಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದರು.

Advertisement

ಅರ್ಜಿ ಸಲ್ಲಿಕೆ ಬಗ್ಗೆ ಜಾಗೃತಿ : ಮತದಾರರು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಮನೆ ಬದಲಾವಣೆ ಮಾಡಿರುತ್ತಾರೆ. ಅಲ್ಲಿ ಮತ್ತೆ ಹೊಸದಾಗಿ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ. ಇದರಿಂದ ಎರಡೆರಡು ಕಡೆ ಮತದಾರರ ಹೆಸರುಗಳು ಪಟ್ಟಿಯಲ್ಲಿ ಬರಲಿದೆ. ಈ ರೀತಿ ಮಾಡದೇ ನಮೂನೆ-8ರಲ್ಲಿ ಸ್ಥಳ ಬದಲಾವಣೆ ಅರ್ಜಿ ಸಲ್ಲಿಸಬೇಕು. ಇದರಿಂದ ಮತದಾರರ ಪಟ್ಟಿಯಲ್ಲಿನ ಹೆಸರು ವರ್ಗಾವಣೆ ಮಾಡಲು ಸುಲಭವಾಗಲಿದೆ. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next