Advertisement

ವಾರ ಭವಿಷ್ಯ: ಈ ರಾಶಿಯವರಿಗೆ ಈ ವಾರ ಹಿತಶತ್ರುಗಳ ಭಾಧೆ ತಪ್ಪದು

10:04 AM Feb 10, 2020 | Team Udayavani |

9-2-2020 ರಿಂದ 15-2-2020ರ ವರೆಗೆ

Advertisement

ಮೇಷ: ಗುರುಬಲ ಹಾಗೂ ಲಾಭಸ್ಥಾನದ ರಾಹುಬಲವಿದ್ದು ವೃತ್ತಿ ರಂಗದಲ್ಲಿ ನಿಯತ್ತಿನಿಂದ ದುಡಿಯುವ ನಿಮಗೆ ತಡವಾಗಿ ಆದರೂ ಪ್ರತಿಫ‌ಲವು ನಿಶ್ಚಿತ ರೂಪದಲ್ಲಿ ದೊರಕಲಿದೆ.ಕೆಲವೊಮ್ಮೆ ದೈಹಿಕ ಕ್ರಿಯೆಗಳಿಂದಾಗಿ, ನಿರಾಸಕ್ತಿಯಿಂದ ಉತ್ಸಾಹವು ಕುಗ್ಗಲಿದೆ. ಅವಿವಾಹಿತರಿಗೆ ವೈವಾಹಿಕ ಯೋಗವಿದ್ದು, ಪ್ರಸ್ತಾವಗಳು ಕಂಕಣಬಲದ ಸಾಧ್ಯತೆ ನೀಡುತ್ತವೆ. ವಿದ್ಯಾರ್ಥಿಗಳ ಪ್ರಯತ್ನ ಬಲವು ನಿರೀಕ್ಷಿತ ಫ‌ಲಿತಾಂಶಕ್ಕೆ ಕಾರಣವಾಗುತ್ತದೆ. ಗುರು ಹಿರಿಯರ ಆಶೀರ್ವಾದದಿಂದ ಸಾಂಸಾರಿಕ ಜೀವನ ಸಂತೋಷದಾಯಕ.
ಶುಭವಾರ: ಮಂಗಳ, ಗುರು, ಶನಿವಾರ

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಚಿಂತನೆಯನ್ನು ಅವಲೋಕಿಸಿಯೇ ಮುಂದಿನ ಹೆಜ್ಜೆಯನ್ನು ಇಡುವುದು ಲೇಸು. ಸಾಂಸಾರಿಕವಾಗಿ ಕುಟುಂಬದ ಸದಸ್ಯರ ಪ್ರೀತಿ-ವಿಶ್ವಾಸ, ಸಹಕಾರಗಳು ಇದ್ದರೂ ಆರೋಗ್ಯ ಭಾಗ್ಯದ ಬಗ್ಗೆ ಜಾಗ್ರತೆ ಇರಬೇಕು. ಅವಿವಾಹಿತರಿಗೆ ಪ್ರಯತ್ನಬಲದ ವೈವಾಹಿಕಸಂಬಂಧಗಳು ಗಟ್ಟಿಯಾಗಲಿವೆ. ರಾಜಕೀಯ ವರ್ಗದವರ ಚಾಣಾಕ್ಷತನದ ಸಕ್ರಿಯತೆ ರಾಜಕಾರಣ ದಲ್ಲಿ ಪ್ರಕಟವಾಗಲಿದೆ. ವೈಯಕ್ತಿಕ ಆರೋಗ್ಯ ಭಾಗ್ಯ ಹಂತ ಹಂತವಾಗಿ ಸುಧಾರಿಸುತ್ತಾ ಹೋದೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.
ಶುಭವಾರ: ಬುಧ, ಗುರು, ಶುಕ್ರವಾರ

ಮಿಥುನ: ಗೋಚರದ ಕಾಳಸರ್ಪ ಯೋಗದಿಂದ ಆಗಾಗ ಏರು ಪೇರುಗಳು ತೋರಿಬಂದರೂ ನಿಮ್ಮ ಮನಸ್ಸಿನಾಳದ ಸುಪ್ತ ಬಯಕೆಗಳು ನಿಶ್ಚಿತವಾಗಿ ಗೋಚರಕ್ಕೆ ಬಂದಾವು. ಯಾವುದೇ ವಾದ-ವಿವಾದಗಳಿಗೆ ಸಿಲುಕದೆ ಮುಂದುವರಿಯಬೇಕು. ಅಸಾಧ್ಯತೆಯು ಸಾಧ್ಯತೆಯನ್ನು ತಂದೀತು. ಹಿರಿಯರ ಆರೋಗ್ಯ ಭಾಗ್ಯಕ್ಕಾಗಿ ಆಸ್ಪತ್ರೆಯ ಅಲೆದಾಟವಿದೆ. ಅವಿವಾಹಿತರ ದೃಢ ನಿರ್ಧಾರ ಕಂಕಣಬಲಕ್ಕೆ ಪೂರಕವಾದೀತು. ಹೂಡಿಕೆಗಳು ಬಲಗೊಂಡಲ್ಲಿ ಆರ್ಥಿಕವಾಗಿ ಲಾಭವನ್ನು ನೀಡಲಿದೆ.
ಶುಭವಾರ: ಸೋಮ, ಶುಕ್ರ, ಭಾನುವಾರ

ಕರ್ಕಾ: ವೃತ್ತಿರಂಗದಲ್ಲಿ ಆಗಾಗ ಅಭಿವೃದ್ಧಿದಾಯಕ ಬೆಳವಣಿಗೆಗಳು ಕಂಡುಬಂದರೂ ತುಸು ಬದಲಾವಣೆಗೆ ಸಿದ್ಧರಾಗಬೇಕಾದೀತು. ಹೊಸತನದ ಚಿಂತನೆ ಕಾರ್ಯಸಾಧನೆಗೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ಆದಾಯವಿದ್ದರೂ ಕಳಂಕಿತರೊಡನೆ ವ್ಯವಹರಿಸಬೇಕಾದ ಸಂದಿಗ್ಧತೆ ಆತಂಕ ತಂದೀತು. ಸಾಂಸಾರಿಕವಾಗಿ ಸಂತಸದ ವಾತಾವರಣ ಉತ್ಸಾಹಿತರನ್ನಾಗಿ ಮಾಡಲಿದೆ. ವೈವಾಹಿಕ ಭಾಗ್ಯವು ಮುಖ್ಯವಾಗಿ ಹೊಂದಾಣಿಕೆಯಲ್ಲಿರುತ್ತದೆ.
ಶುಭವಾರ: ಮಂಗಳ, ಗುರು, ಶನಿವಾರ

Advertisement

ಸಿಂಹ: ಶುಭಮಂಗಲ ಕಾರ್ಯಗಳಿಗೆ ಅಧಿಕವಾಗಿ ಹಣವ್ಯಯವಾದರೂ ಸಂತೃಪ್ತಿ ದೊರಕಲಿದೆ. ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಮುನ್ನಡೆಗೆ ಸಾಧಕವಾಗಲಿದೆ. ವೈವಾಹಿಕ ಸಂಬಂಧಗಳ ಬಗ್ಗೆ ಆತುರತೆ ಸಲ್ಲದು. ಸಾಂಸಾರಿಕವಾಗಿ ಸಣ್ಣಸಣ್ಣ ಮನಸ್ತಾಪದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ತಾಳ್ಮೆ-ಸಮಾಧಾನವಿರಲಿ. ಚಿಂತೆಯನ್ನು ಬದಿಗೊತ್ತಿ ನೆಮ್ಮದಿಯನ್ನು ಕಾಪಾಡಿಕೊಳ್ಳಿರಿ. ದೂರಸಂಚಾರದ ಅಲೆದಾಟವಿದ್ದರೂ ಕಾರ್ಯಸಾಧನೆ ಇದೆ. ಅನಿರೀಕ್ಷಿತವಾಗಿ ಶುಭವಾರ್ತೆ ಬಂದು ಮನಸ್ಸಿಗೆ ಸಮಾಧಾನ ಸಿಗಲಿದೆ.
ಶುಭವಾರ: ಗುರು, ಶುಕ್ರ, ಶನಿವಾರ

ಕನ್ಯಾ: ಸಾರ್ಥಕತೆಯಿಂದ ಶತ್ರುಭಯ ನಿವಾರಣೆಯಾದರೂ ಹಿತಶತ್ರು ಬಾಧೆ ನಿಲ್ಲದು. ಆರ್ಥಿಕವಾಗಿ ಸಾಲದ ಕಿರಿಕಿರಿಯನ್ನು ಅನುಭವಿಸುವಂತಾಗುತ್ತದೆ. ಕಾಳಜಿ ವಹಿಸಿರಿ. ಯಾವುದೇ ವಿಚಾರದಲ್ಲಿ ಸಾಂಸಾರಿಕ ಯಾ ಕಾರ್ಯ ರಂಗದಲ್ಲಿ ಕಾಲೋಚಿತ ನಡೆ-ನುಡಿಗಳು ನಿಮ್ಮ ಗಮನದಲ್ಲಿರ ಬೇಕಾಗುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಯಾಮುಂಭಡ್ತಿಯ ಸಿಹಿಸುದ್ದಿ ಸಂತಸ ತರುತ್ತದೆ. ವಿದ್ಯಾರ್ಥಿಗಳ ಉದಾಸೀನತೆ ಆಗಾಗ ಹಿನ್ನಡೆಗೆ ಕಾರಣವಾಗಿ ನಿರೀಕ್ಷಿತ ಫ‌ಲ ಸಿಗಲು ಕಷ್ಟವಾಗುತ್ತದೆ.
ಶುಭವಾರ: ಸೋಮ, ಗುರು, ಶನಿವಾರ

ತುಲಾ: ಜೀವನದಲ್ಲಿ ಪುನರುತ್ಥಾನ ತೋರಿಬರುವುದರಿಂದ ಬಂದ ಅವಕಾಶಗಳನ್ನು ಸದುಪಯೋಗಿಸಬೇಕು. ಸಾಂಸಾರಿಕವಾಗಿ ಮನದನ್ನೆಯ ಮಾತು ಮೀರದಿರುವುದೇ ಲೇಸು. ಹಂತ ಹಂತವಾಗಿ ಹಿತ ಶತ್ರುಗಳ ಬಾಧೆ ಕಡಿಮೆಯಾಗಲಿದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಕನಸು ನನಸಾದೀತು. ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲತೆಗೆ ಜನಾನುರಾಗ ಲಭಿಸುವುದು. ವೃತ್ತಿರಂಗದ ಯೋಜನೆಯೊಂದು ಸಾಕಾರವಾಗಲಿದೆ. ಆಗಾಗ
ಗೃಹಾಲಂಕಾರ ವಸ್ತುಗಳು, ವಿಲಾಸೀ ಸಾಮಗ್ರಿಗಳು ಮನೆಯನ್ನು ಅಲಂಕರಿಸಲಿವೆ.
ಶುಭವಾರ: ಸೋಮ, ಮಂಗಳ, ಬುಧವಾರ

ವೃಶ್ಚಿಕ: ಕಾರ್ಯರಂಗದ ಕೆಲಸಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಮ್ಮ ಜಾಣ್ಮೆ ಅಡಗಿರುತ್ತದೆ. ಬೇಸಾಯ, ಕೃಷಿ ಅಭಿರುಚಿಯನ್ನು ಮೈಗೂಡಿಸಿಕೊಂಡು ಮುಂದುವರಿದಲ್ಲಿ ಮಾತ್ರ ಬೇಸಾಯಗಾರರಿಗೆ ಹೆಚ್ಚಿನ ಲಾಭದಾಯಕ ಆದಾಯ ತುಂಬಿ ಬರಲಿದೆ. ಮದುವೆ ಆಗಬಯಸುವವರು, ಯೋಗ್ಯವಯಸ್ಕರ ಪ್ರಯತ್ನಬಲ, ಕ್ರಿಯಾಶೀಲತೆಗೆ ಸೂಕ್ತ ಅವಕಾಶಗಳು ನಿಶ್ಚಿತವಾಗಿ ಲಭಿಸುತ್ತವೆ. ಆರೋಗ್ಯದಲ್ಲಿ ಜಾಗ್ರತೆ ಮಾಡುವುದು.
ಶುಭವಾರ: ಬುಧ, ಗುರು, ಶುಕ್ರವಾರ

ಧನು: ಕುಟುಂಬ ವರ್ಗದಲ್ಲಿ ಸಹಮತವಿರದೆ ಅಸ್ಥಿರತೆಯಿಂದ ಕೆಲಸ ಕಾರ್ಯಗಳು ವಿಳಂಬವಾದಾವು. ಕಾರ್ಯಕ್ಷೇತ್ರದಲ್ಲಿ ಬುದ್ಧಿಜೀವಿಗಳ ಮುಖಭಂಗವಾದೀತು. ರಾಜಕೀಯ ವರ್ಗದಲ್ಲಿ ನಯವಂಚನೆಯಿಂದ ಸ್ಥಾನ ಭಂಗವಾಗಲಿದೆ. ಆರ್ಥಿಕ ಸ್ಥಿತಿಯು ಸಮಾಧಾನಕರವಾದರೂ ಖರ್ಚು- ವೆಚ್ಚಗಳಿಂದ ಏರುಪೇರಾಗಿ ಕ್ಲೇಶಕ್ಕೆ ಕಾರಣವಾಗಲಿದೆ. ಸಾಮಾಜಿಕ ಕೆಲಸ ಕಾರ್ಯಗಳಿಂದ ದೂರವಿದ್ದಷ್ಟು ನೆಮ್ಮದಿ ಸಿಗಲಿದೆ. ವೈಯಕ್ತಿಕವಾಗಿ ಆರೋಗ್ಯಭಾಗ್ಯ ಹಾಗೂ ಚಿಂತನೆಯಲ್ಲಿ ಪ್ರತಿಕೂಲ ಪರಿಣಾಮವಾದೀತು.
ಶುಭವಾರ: ಗುರು, ಶುಕ್ರ, ಶನಿವಾರ

ಮಕರ: ಆತ್ಮವಿಮರ್ಶೆಗೆ ಸಕಾಲವಾದೀತು. ಚಿಂತಿತ ಕೆಲಸ ಕಾರ್ಯಗಳಿಗೆ ಫ‌ಲ ಸಿಗಲಿದೆ. ಆರ್ಥಿಕವಾಗಿ ಹೂಡಿಕೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣವಿರುತ್ತದೆ. ಅದೇ ರೀತಿ ಸಾಂಸಾರಿಕ ಸುಖ, ಕುಟುಂಬ ಸುಖದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹೆಚ್ಚಿನಂಶ ಬಿಡುವಿಲ್ಲದ ಕಾರ್ಯಕ್ರಮಗಳಿಂದ ದೇಹಾಯಾಸ ಗಣನೆಗೆ ಬಾರದಿದ್ದರೂ ಕಾಳಜಿ ಅಗತ್ಯವಿರುತ್ತದೆ. ನಿರುದ್ಯೋಗಿಗಳ ಪ್ರಯತ್ನಬಲದ ಕ್ರಿಯಾಶೀಲತೆಗೆ ಸೂಕ್ತ ಅವಕಾಶಗಳು ನಿಶ್ಚಿತವಾಗಿ ಲಭಿಸುತ್ತವೆ.
ಶುಭವಾರ: ಬುಧ, ಶುಕ್ರ, ಭಾನುವಾರ

ಕುಂಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಅಭಿವೃದ್ಧಿ ಹಿತಶತ್ರುಗಳು ಹುಬ್ಬೇರಿಸುವಂತಾದೀತು. ಆದರೂ ಅನಗತ್ಯ ವಿಚಾರಗಳು ನಿಮ್ಮನ್ನು ಚಿಂತಾಕ್ರಾಂತರನ್ನಾಗಿ ಮಾಡಲಿದೆ. ವೈವಾಹಿಕ ಸಂಬಂಧಗಳ ನಿರ್ಧಾರವು ದೃಢವಾಗಿರಲಿ. ಮನದಿನಿಯನ ಮನವರಿತು ನಡೆಯುವ ಗೃಹಿಣಿಗೆ ಸಮಾಧಾನದ ವಾತಾವರಣವು ತುಸು ಖುಶಿ ನೀಡಲಿದೆ. ಆರ್ಥಿಕವಾಗಿ ಯಾರನ್ನೂ ನಂಬದಂಥ ಪರಿಸ್ಥಿತಿ ಇದ್ದರೂ ಧನಾಗಮನ ನಿರಂತರವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉತ್ತಮ ಫ‌ಲಿತಾಂಶ ದೊರಕಲಿದೆ.
ಶುಭವಾರ: ಗುರು, ಶನಿ, ಭಾನುವಾರ.

ಮೀನ: ಸುಖ-ದುಃಖಾನುಪಾತದಲ್ಲಿ ದುಃಖಾಂಶವೇ ಅಧಿಕ ರೂಪದಲ್ಲಿ ಅನುಭವ ತಂದೀತು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಮರ್ಪಣಾಭಾವ ಸಾರ್ಥಕ್ಯವನ್ನು ತಂದು ಕೊಡಲಿದೆ. ಮುಖ್ಯವಾಗಿ ಅವಿವಾಹಿತರು ಆಗಾಗ ಬಂದ ಅವಕಾಶದ ಸಂಬಂಧಗಳನ್ನು ಸದುಪಯೋಗಿಸಿಕೊಂಡಲ್ಲಿ ಮಾತ್ರ ವೈವಾಹಿಕ ಭಾಗ್ಯ ಒದಗಿ ಬರುತ್ತದೆ. ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರುಕುಳದಿಂದ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದೀತು. ಜಾಗ್ರತೆ ವಹಿಸಿರಿ. ಆಗಾಗ ನಿರ್ಧಾರಗಳು
ಶುಭವಾರ: ಸೋಮ, ಶುಕ್ರ, ಶನಿವಾರ

Advertisement

Udayavani is now on Telegram. Click here to join our channel and stay updated with the latest news.

Next