Advertisement
ಪರಿಣಾಮ ತರಕಾರಿ ಪದಾರ್ಥ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಬರುವ ಗ್ರಾಹಕರು, ಸಾರ್ವಜನಿಕರು, ಶಾಲಾ ಮಕ್ಕಳು, ಮಹಿಳೆಯರು ಚಲಿಸುವ ವಾಹನಗಳ ನಡುವೆಯೇ ನಡೆದಾಡಬೇಕಾದ ದುಸ್ಥಿತಿ ಬಂದೋದಗಿದೆ. ಇಲ್ಲಿನ ಹಳೇ ಪುರಸಭೆ ಕಚೇರಿ ಮುಂಭಾಗದ ಹುಣಸೂರು-ಬೇಗೂರು ರಸ್ತೆಗೆ ಅಂಟಿಕೊಂಡಂತೆ ಇರುವ ಉಪ್ಲಿ ಕೆರೆ ಪ್ರದೇಶದಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ಹತ್ತಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
Related Articles
Advertisement
ನಿಯಮ ಉಲ್ಲಂಘನೆ: ಪಿಸ್ಸೈ ಬಾಲಕೃಷ್ಣಗೌಡ ಅವರು ವರ್ಗಾವಣೆ ಆದ ನಂತರ ವ್ಯಾಪಾರಿಗಳು ಮತ್ತೆ ಫುಟ್‌ಪಾತ್ ಆವರಿಸಿಕೊಂಡು ರಸ್ತೆ ಬದಿಗೆ ಬಂದು ವ್ಯಾಪಾರ ವಾಹಿವಾಟು ನಡೆಸುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಮತ್ತೆ ಪಾದಚಾರಿಗಳು ನಡೆದಾಡಲು ಫುಟ್‌ಪಾತ್ ಇಲ್ಲದ ಕಾರಣ ರಸ್ತೆ ಮೇಲೆ ಸಂಚರಿಸುವ ವಾಹನಗಳ ನಡುವೆಯೇ ಸಂಚಾರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪುರಸಭೆ ನಿರ್ಲಕ್ಷ್ಯ: ಈ ಅವ್ಯವಸ್ಥೆಯನ್ನು ಕಣ್ಣರೇ ಕಂಡರೂ ಪುರಸಭೆ ಅಧಿಕಾರಿಗಳಾಗಲೀ, ಕಾನೂನು ಸುವವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗಳಾಗಲೀ ಸರಿಪಡಿಸಲು ಮುಂದಾಗದೇ, ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಉಡಾಫೆ ಉತ್ತರ: ಈ ಬಗ್ಗೆ ವ್ಯಾಪಾರಿಗಳನ್ನು ಪಾದಚಾರಿಗಳು ಸಾರ್ವಜನಿಕರು ಪ್ರಶ್ನಿಸಿದರೇ, ನಾವೇನ್ ದಿನ ಬರಿ¤ದ್ವಾ, ನೀ ಯಾರು ಕೇಳಲು ಎಂದಲ್ಲ ಏಕವಚನದಲ್ಲಿ ಮಾತನಾಡುವುದಲ್ಲದೇ, ಕೆಲವೊಮ್ಮೆ ವ್ಯಾಪಾರಿಗಳು ಸೇರಿಕೊಂಡು ಪ್ರಶ್ನಿಸಿದವರ ಮೇಲೆಯೇ ದಬ್ಟಾಳಿಕೆ ಮಾಡಲು ಮುಂದಾಗುತ್ತಾರೆ ಎಂದು ಸಾರ್ವಜನಿಕರು ಅವಲತ್ತುಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂತೆ ವ್ಯಾಪಾರಿಗಳಿಗೆ ಎಚ್.ಬಿ.ರಸ್ತೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಸಾಮಗ್ರಿಗಳನ್ನು ಜೋಡಿಸಿ ಮುಂದಾಗದಂತೆ ಸಂತೆ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ, ವಾಹನ ಸವಾರರಿಗೆ, ಪಾದಚಾರಿಗಳಿಗೆ, ಸಂತೆಗೆ ಬರುವ ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
ವಾರದ ಸಂತೆಗೆ ಬರುವ ವ್ಯಾಪಾರಿಗಳು ಪಟ್ಟಣದ ಎಚ್.ಬಿ.ರಸ್ತೆಯ ಫುಟ್‌ಪಾತ್ ಮೇಲೆ ಹಣ್ಣು, ತರಕಾರಿ, ಬಟ್ಟೆ ಇನ್ನಿತರ ವಸ್ತುಗಳನ್ನು ಇಟ್ಟಿಕೊಳ್ಳುವುದರಿಂದ ಪಾದಚಾರಿಗಳಿಗೆ, ಮಹಿಳೆಯರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದ್ದು, ರಸ್ತೆಯ ಮೇಲೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.-ಕೃಷ್ಣಪ್ರಸಾದ್, ಹಿರಿಯ ನಾಗರಿಕರು * ಬಿ.ನಿಂಗಣ್ಣ ಕೋಟೆ