Advertisement

ಬೆಳೆ ಹಾನಿ ರೈತರ ವಿವರ ದಾಖಲಿಸಲು ವಾರದ ಗಡುವು

08:35 PM Nov 23, 2020 | Suhan S |

ಯಾದಗಿರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ರೈತರಿಗಾದ ಬೆಳೆ ನಷ್ಟ ಪರಿಹಾರವನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡುತ್ತಿದ್ದು, ಮುಂಬರುವ ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಆರ್‌ ಅಧಿಕಾರಿಗಳಿಗೆ ಗಡುವು ನೀಡಿದರು. ಶನಿವಾರ ನಗರದ ಜಿಲ್ಲಾಧಿಕಾರಿ

Advertisement

ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಇತರೆ ಇಲಾಖೆಗಳ ಅಧಿ ಕಾರಿಗಳ ಸಭೆಯಲ್ಲಿಅವರು ಮಾತನಾಡಿದರು. ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಈ ನಷ್ಟಕ್ಕೆ ಸಂಬಂ ಧಿಸಿದಂತೆ ರೈತರ ಮಾಹಿತಿಯನ್ನು ಪರಿಹಾರ ಆನ್‌ಲೈನ್‌ ನಲ್ಲಿ ದಾಖಲಿಸಬೇಕು. ಅದನ್ನು ಮುಂದಿನವಾರದೊಳಗೆ ಪೂರ್ಣಗೊಳಿಸಬೇಕು, ಗ್ರಾಮಲೆಕ್ಕಾಧಿ ಕಾರಿಗಳ ಪರಿಹಾರ ಲಾಗ್‌ಇನ್‌ನಲ್ಲಿಬಾಕಿ ಉಳಿದಿರುವ ರೈತರ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ ಅನುಮೋದನೆನೀಡುವಂತೆ ಎಲ್ಲಾ ಗ್ರಾಮ ಲೆಕ್ಕಾ ಧಿಕಾರಿಗಳಿಗೆಇಂದೇ ನಿರ್ದೇಶನ ನೀಡುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಸೂಚಿಸಿದರು.

ವಡಗೇರಾ ತಾಲೂಕಿನ ಶಿವನೂರು, ಶಹಾಪುರದ ಅಣಬಿ ಮತ್ತು ರೋಜಾಗ್ರಾಮಗಳ ಸ್ಥಳಾಂತರಕ್ಕೆ ಸೂಕ್ತ ಜಮೀನು ಗುರುತಿಸಿ ವರದಿ ನೀಡಬೇಕು. ಆನೂರು ಕೆ ಗ್ರಾಮಸ್ಥರಿಗೆ ಹಕ್ಕು ಪತ್ರಗಳನ್ನು ಶೀಘ್ರದಲ್ಲೇ ವಿತರಿಸುವಂತೆ ತಹಶೀಲ್ದಾರರಿಗೆ ತಿಳಿಸಿದರು. ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಇಲಾಖೆಗಳು ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸಂಬಂಧಿ ಸಿದಂತೆ ತೆಗೆದುಕೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದ ಕಾಮಗಾರಿಗಳನ್ನಾಗಿ ಮಾಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ್‌, ಸಹಾಯಕ ಆಯುಕ್ತಶಂಕರ ಗೌಡ ಸೋಮನಾಳ್‌, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ,ಗುರುಮಠಕಲ್‌ ತಹಶೀಲ್ದಾರ್‌ ಸಂಗಮೇಶ್‌ಜಿಡಗೆ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಪಂಚಾಯತ್‌ ರಾಜ್‌ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next