Advertisement

ಅಂಗಡಿಗಳಲ್ಲಿ ಕನ್ನಡ ಫ‌ಲಕ ಅಳವಡಿಕೆಗೆ ವಾರ ಗಡುವು 

01:07 PM Dec 19, 2021 | Team Udayavani |

ಚಾಮರಾಜನಗರ: ನಗರದ ಅಂಗಡಿ ಮುಂಗಟ್ಟು, ವಾಣಿಜ್ಯ ಸಮುಚ್ಚಯಗಳಲ್ಲಿ ಕನ್ನಡಭಾಷೆಯ ನಾಮಫ‌ಲಕ ಅಳವಡಿಕೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾಸೇನೆ(ಕರಸೇ) ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ನಗರಸಭೆ ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾಸೇನೆ ಪದಾಧಿಕಾರಿಗಳು ಧರಣಿ ನಡೆಸಿ ಘೋಷಣೆ ಕೂಗಿದರು. ಕರ್ನಾಟಕ ರಕ್ಷಣಾಸೇನೆ ಜಿಲ್ಲಾಧ್ಯಕ್ಷ ಮಿಂಚುಾಗೇಂದ್ರ ಮಾತನಾಡಿ, ನಗರದ ವಿವಿಧ ಅಂಗಡಿ ಮುಂಗಟ್ಟುಗಳ ನಾಮಫ‌ಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಕನ್ನಡ ಅಕ್ಷರಗಳನ್ನು ಚಿಕ್ಕದಾಗಿಯೂ, ಇಂಗ್ಲಿಷ್‌ ಅಕ್ಷರಗಳನ್ನು ದೊಡ್ಡದಾಗಿಯೂ ಬರೆಸಲಾಗುತ್ತದೆ. ಕರ್ನಾಟಕದಲ್ಲಿ ಅಂಗಡಿಗಳ ನಾಮಫ‌ಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಅನ್ಯಭಾಷೆಗಿಂತ ದಪ್ಪ ಅಕ್ಷರದಲ್ಲಿ ಫ‌ಲಕ ಬರೆಸಬೇಕೆಂಬ ನಿಯಮವಿದೆ. ಆದರೆ ಇದನ್ನು ಉಲ್ಲಂಘಿಸಲಾಗುತ್ತಿದೆ ಎಂದರು.

ವಾರದೊಳಗೆ ನಗರದ ಎಲ್ಲ ಅಂಗಡಿಮುಂಗಟ್ಟು, ವಾಣಿಜ್ಯ ಸಮುಚ್ಚಯಗಳ ನಾಮಫ‌ಲಕಗಳಲ್ಲಿ ಕನ್ನಡಭಾಷೆಯ ಅಕ್ಷರಗಳು ದೊಡ್ಡದಾಗಿ ಕಾಣಿಸುವಂತೆ ಬರೆಸಲು ನಗರಸಭೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಸಿ.ಡಿ.ಪ್ರಕಾಶ್‌, ನಗರಘಟಕದ ಅಧ್ಯಕ್ಷ ಮಂಜುನಾಥ್‌, ಜಿಲ್ಲಾ ಕಾರ್ಯದರ್ಶಿ ರುದ್ರ, ಸಂಚಾಲಕ ಮಹೇಶ್‌, ಆಟೋಮಹದೇವಸ್ವಾಮಿ ಸೇರಿದಂತೆ ಗ್ರಾಮಘಟಕದ ಪದಾಧಿಕಾರಿಗಳು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next