Advertisement
ಹೌದು, ವೀಕೆಂಡಿನಲ್ಲಿ ಲಾಲ್‌ಬಾಗ್ ಕೇವಲ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿ ಮಾತ್ರವೇ ಉಳಿದಿಲ್ಲ. ಅದೀಗ ಭೋಜನಶಾಲೆ. ಅಲ್ಲಿ ಹೂವುಗಳ ಪರಿಮಳ ಮಾತ್ರ ಮೂಗಿಗೆ ತಾಕುವುದಿಲ್ಲ. ಬಗೆ ಬಗೆಯ ಖಾದ್ಯ, ಒಗ್ಗರಣೆಯ ಪರಿಮಳವೂ ಪ್ರವಾಸಿಗರ ಮೂಗನ್ನು ಅರಳಿಸುತ್ತದೆ. ಬೆಂಗಳೂರಿನ ಯಾವುದೇ ಫೈವ್‌ಸ್ಟಾರ್ ಹೋಟೆಲ್ ಕೊಡದ ಭೋಜನ ಸಂತೃಪ್ತಿ, ಲಾಲ್‌ಬಾಗ್‌ನ ವೀಕೆಂಡ್ ಭೋಜನದಲ್ಲಿ ಸಿಗುತ್ತದೆ!
ಉದ್ಯಾನ ಭೋಜನ ಎಂದರೆ, ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ ಅಲ್ಲಿನ ಆ ವಾತಾವರಣದಲ್ಲಿ ಎಲ್ಲರೂ ಒಂದಾಗಿ ಆಹಾರವನ್ನು ಸವಿಯುವುದೇ ಆಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ವನಭೋಜನ ನಡೆಸುತ್ತಾರೆ. ಆದರೆ, ಇಲ್ಲಿ ಯಾರೂ ಅಂಥ ವಿಶೇಷ ಸಂದರ್ಭಗಳಿಗೆ ಕಾಯುವುದಿಲ್ಲ. ಶನಿವಾರ, ಭಾನುವಾರ ಬಂತೆಂದರೆ, ಬುತ್ತಿಗಳನ್ನು ಕೊಂಡೊಯ್ದು, ಅಲ್ಲಿ ಊಟ ಸವಿಯುತ್ತಾರೆ.
Related Articles
ಬೆಂಗಳೂರಿನ ಈ ಒತ್ತಡದ ಬದುಕಿನಲ್ಲಿ ಕುಟುಂಬದವರ ಮುಖ ನೋಡುತ್ತಾ, ಊಟ ಮಾಡುವುದೇ ಕಡಿಮೆಯಾಗಿದೆ. ಅಂಥದ್ದರಲ್ಲಿ ಉದ್ಯಾನ ಭೋಜನ ಈ ಮುಖದರ್ಶನ ಭಾಗ್ಯವನ್ನೂ ಕಲ್ಪಿಸುತ್ತಿದೆ. ಅಲ್ಲದೇ, ಇಲ್ಲಿ ಮನೆಯ ಹಿರಿಯರು ಕೈತುತ್ತು ಕೊಡುವ ದೃಶ್ಯಗಳನ್ನೂ ಕಾಣಬಹುದಾಗಿದೆ. ಗಿಡಮರಗಳ ಆ ತಂಪುಗಾಳಿ, ಹಕ್ಕಿಗಳ ಚಿಲಿಪಿಲಿ ಸದ್ದುಗಳು, ಉದ್ಯಾನ ಭೋಜನಕ್ಕಾಗಿಯೇ ಹಾಕಿದ ನಿಸರ್ಗದ ಸಂಗೀತ ಎಂಬಂತಿದೆ
Advertisement
ಲಾಲ್‌ಬಾಗ್ ಮಾತ್ರವಲ್ಲ!ಅಂದಹಾಗೆ, ಉದ್ಯಾನ ಭೋಜನದ ಈ ಟ್ರೆಂಡ್ ಕೇವಲ ಲಾಲ್‌ಬಾಗ್‌ನಲ್ಲಿ ಮಾತ್ರವೇ ಕಾಣಸಿಗುವುದಿಲ್ಲ. ಕಬ್ಬನ್ ಪಾರ್ಕ್, ಜೆ.ಪಿ. ಪಾರ್ಕ್, ಜಿಂಕೆ ಪಾರ್ಕ್‌ಗಳಲ್ಲೂ ಇಂಥ ದೃಶ್ಯಗಳು ಸಾಮಾನ್ಯವಾಗಿರುತ್ತವೆ. ಕೆಲಸದೊತ್ತಡವನ್ನು ಮರೆಯುತ್ತಾ, “ನಗುವೇ ಈ ನಗರಿಯ ನಗದು ಬಹುಮಾನ’ ಎಂಬಂಥ ಖುಷಿಯಲ್ಲಿ ಎಲ್ಲರೂ ತೇಲುತ್ತಿರುತ್ತಾರೆ. ಅನೇಕ ಸಲ ಮಳೆಗೂ ಅಂಜದೇ, ಈ ಉದ್ಯಾನ ಭೋಜನ ಭರ್ಜರಿಯಾಗಿ ಸಾಗುವುದನ್ನು ನೀವು ನೋಡಬಹುದು. ವಾರಾಂತ್ಯದಲ್ಲಿ ಲಾಲ್‌ಬಾಗ್ ವಿಶೇಷವಾಗಿ ಕಳೆಗಟ್ಟುತ್ತದೆ. ಆ ಎರಡು ದಿನ ಸುಮಾರು ಆರೇಳು ಸಾವಿರ ಜನರು ಬರುತ್ತಾರೆ. ಆದರೆ, ಈಗೀಗ ಅನೇಕ ಕುಟುಂಬಗಳು ಊಟದ ಡಬ್ಬಿಗಳನ್ನು ಮನೆಯಿಂದ ತಂದು, ಇಲ್ಲಿಯೇ ಸವಿಯುತ್ತಾರೆ.
– ಚಂದ್ರಶೇಖರ್, ಉಪನಿರ್ದೇಶಕರು, ಲಾಲ್‌ಬಾಗ್ ನಾವು ಲಾಲ್‌ಬಾಗ್‌ಗೆ ತಿಂಗಳಲ್ಲಿ ಒಮ್ಮೆಯಾದರೂ ಊಟ ಕಟ್ಟಿಕೊಂಡು ಬರುತ್ತೇವೆ. ಕುಟುಂಬದೊಡನೆ, ಈ ಹಸಿರ ನಿಸರ್ಗದ ನಡುವೆ, ಶಾಂತ ವಾತಾವರಣದಲ್ಲಿ ಊಟ ಸವಿಯುವ ಖುಷಿಯೇ ಬೇರೆ.
– ಪ್ರಭಾಕರ್, ಮಲ್ಲೇಶ್ವರಂ ನಿವಾಸಿ ಸೌಮ್ಯಶ್ರೀ ಎನ್.