Advertisement
ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಹೆಚ್ಚಿನ ಪ್ರವಾಸಿಗರು ಧಾರ್ಮಿಕ ಕ್ಷೇತ್ರಕ್ಕೆ ಬಂದಿದ್ದರು. ಪ್ರವಾಸಿ ತಾಣಗಳತ್ತ ಲಗ್ಗೆ ಇಡುತ್ತಿದ್ದಾರೆ. ಮಲ್ಪೆ ಬೀಚ್, ಸೈಂಟ್‌ಮೇರಿ ಐಲ್ಯಾಂಡ್, ಸೀವಾಕ್‌ಗೆ ಭೇಟಿ ನೀಡಲು ಬಂದಿದ್ದರಿಂದ ಅಲ್ಲಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಒಂದಡೆ ಮಲ್ಪೆ ಬೀಚ್‌ನಲ್ಲಿ ಇಡೀ ದಿನ ತುಳುನಾಡ ಗೊಬ್ಬಲು ಕಾರ್ಯಕ್ರಮ ಇದ್ದುದರಿಂದ ಸ್ಥಳೀಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು .
ಶ್ರೀ ಕೃಷ್ಣಮಠ, ಕೊಲ್ಲೂರಿನಲ್ಲೂ ಭಕ್ತ ದಂಡು
ರವಿವಾರ ಉಡುಪಿಯ ಶ್ರೀಕೃಷ್ಣಮಠ, ಕೊಲ್ಲೂರಿನ ಶ್ರೀ ಮೂಕಾಂಬಿಕ ದೇವಸ್ಥಾನ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಗುಡ್ಡೆಯ ಮಹಾಗಣಪತಿ ದೇವಸ್ಥಾನ ಸಹಿತವಾಗಿ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ದಂಡೇ ಸೇರಿತ್ತು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕೆಲವು ದೇವಸ್ಥಾನದಲ್ಲಿ ಭಕ್ತರು ದರ್ಶನಕ್ಕಾಗಿ ಕೆಲಹೊತ್ತು ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.
Related Articles
Advertisement
ಕಡಲಬ್ಬರ; ವಾಟರ್ ಸ್ಪೋರ್ಟ್ಸ್ ಬಂದ್ಸಮುದ್ರದ ಅಲೆಗಳ ಒತ್ತಡ ಬೆಳಗ್ಗಿನಿಂದಲೇ ಹೆಚ್ಚು ಕಂಡುಬಂದಿದ್ದು, ಮಧ್ಯಾಹ್ನದ ಬಳಿಕ ಗಾಳಿಯ ವೇಗಕ್ಕೆ ಅಲೆಗಳು ತೀವ್ರತೆ ಪಡೆದುಕೊಂಡಿದ್ದವು. ಹಾಗಾಗಿ ಮಲ್ಪೆ ಬೀಚ್‌ನಲ್ಲಿ ಅಪರಾಹ್ನ 4ರ ಬಳಿಕ ಯಾವುದೇ ವಾಟರ್ ಸ್ಪೋರ್ಟ್ಸ್ ನಡೆಸಲು ಆವಕಾಶ ನೀಡಲಿಲ್ಲ. ಈಚೆಗಷ್ಟೇ ಉದ್ಘಾಟನೆಗೊಂಡಿರುವ ನೂತನ ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು ಮತ್ತು ಅನುಭವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೂ ಅವಕಾಶ ನೀಡಲಿಲ್ಲ. ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಸ್ವಯಂಸೇವಕರು ಕಟ್ಟೆಚ್ಚರ ವಹಿಸಿದ್ದಾರೆ. ಇಲ್ಲಿನ ಜೀವ ರಕ್ಷಕ ತಂಡ ಎಲ್ಲರ ಮೇಲೂ ನಿಗಾ ಇರಿಸಿ, ನೀರಿಗಿಳಿಯಲು ನಿಷೇಧ ಹೇರಿದೆ. ಮಕ್ಕಳ ಜತೆ ಪ್ರವಾಸಕ್ಕೆ ಕೊನೆಯ ವಾರಾಂತ್ಯ
ಮುಂದಿನ ಸೋಮವಾರ, ಮೇ 16ರಿಂದ ಶಾಲಾ ಕಾಲೇಜುಗಳು ಆರಂಭವಾಗುತ್ತವೆ. ಮಕ್ಕಳ ಜತೆ ಸಂಸಾರ ಸಹಿತ ಪ್ರವಾಸದ ಮಜಾ ಅನುಭವಿಸಲು ಸಿಗುವ ಕೊನೆಯ ವಾರಾಂತ್ಯ ಈ ಶನಿವಾರ-ರವಿವಾರ ಆದ ಕಾರಣ ಈ ಬಾರಿ ಹೆಚ್ಚು ಜನಸಂದಣಿ ಕಂಡುಬಂದಿದೆ. ಇದರ ಜತೆಗೆ ಶುಭಸಮಾರಂಭಗಳು ಕೂಡ ಹೆಚ್ಚಿದ್ದು, ಜನರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಮೂವರ ರಕ್ಷಣೆ
ಬೀಚ್‌ನ ದಕ್ಷಿಣ ದಿಕ್ಕಿನ ಭಜನ ಮಂದಿರ ಎದುರು ಕೃಷ್ಣಕಟ್ಟೆಯ ಬಳಿ ಸಮುದ್ರದಲ್ಲಿ ಈಜಾಡುತ್ತಿದ್ದ ಮೂವರನ್ನು ಇಲ್ಲಿನ ಜೀವರಕ್ಷಕ ತಂಡವು ರಕ್ಷಿಸಿದೆ. ರವಿವಾರ ಸಂಜೆ ವೇಳೆಗೆ ಸಮುದ್ರದಲೆಗೆ ಕೊಚ್ಚಿ ಹೋಗುತ್ತಿದ್ದ ಈ ಮೂವರನ್ನು ಲೈಫ್ಗಾರ್ಡ್ ಜೆಸ್ಕಿ ಮೂಲಕ ರಕ್ಷಿಸಿದೆ. ಮಕ್ಕಳಿಗೆ ರಜೆ ಮುಗಿಯುವ ವರೆಗೆ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದು, ಜಿಲ್ಲಾಡಳಿತವು ಪ್ರವಾಸಿಗರ ಸುರಕ್ಷೆಯ ದೃಷ್ಟಿಯಿಂದ ತತ್‌ಕ್ಷಣ ಜೆಸ್ಕಿಯನ್ನು ನೀಡುವಂತೆ ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ಆಗ್ರಹಿಸಿದ್ದಾರೆ.