Advertisement

ರಾಜ್ಯಾದ್ಯಂತ ಮಾರುಕಟ್ಟೆಗಳು ಬಂದ್, ಇನ್ನು ಕಠಿಣ ನಿಯಮ ಜಾರಿ

10:51 AM Apr 24, 2021 | Team Udayavani |

ಬೆಂಗಳೂರು: ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಜಾರಿ ಮಾಡಿರುವ ವಾರಾಂತ್ಯದ ಕರ್ಫ್ಯೂ ಈಗ ಮತ್ತಷ್ಟು ಬಿಗಿಯಾಗಿದೆ. ಅಗತ್ಯ ವಸ್ತುಗಳ ಖರೀದಿಗೆ  ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, ಬಳಿಕ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ.

Advertisement

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ 10 ಗಂಟೆಯಾಗುತ್ತಿದ್ದಂತೆ ಮಾರುಕಟ್ಟೆಗಳನ್ನು ಪೊಲೀಸರು ಮುಚ್ಚಿಸಿದರು. ಗ್ರಾಹಕರನ್ನು ಹೊರಕ್ಕೆ ಕಳುಹಿಸಿ, ಮಾರುಕಟ್ಟೆ ಪ್ರವೇಶಿಸುವ ಮಾರ್ಗಕ್ಕೆ ಬ್ಯಾರಿಕೇಡ್ ಅಡ್ಡ ಇಟ್ಟ ದೃಶ್ಯಗಳು ಕಂಡುಬಂತು.

ಇದನ್ನೂ ಓದಿ:Covid-19; ಯುಎಇ, ಯುಕೆ ಬಳಿಕ ಕುವೈಟ್ ನಿಂದಲೂ ಭಾರತದ ವಿಮಾನ ಸಂಚಾರಕ್ಕೆ ನಿಷೇಧ

ರಾಜಧಾನಿ ಬೆಂಗಳೂರಿನಲ್ಲಿ ಸಂಪೂರ್ಣ ಅಘೋಷಿತ ಲಾಕ್ ಡೌನ್ ಸ್ಥಿತಿ ನಿರ್ಮಾಣವಾಗಿದೆ. ಯಾರೊಬ್ಬರೂ ಕೂಡ ರಸ್ತೆಗಳಿಗೆ ಇಳಿಯುವಂತಿಲ್ಲ. ರೋಡಿಗಿಳಿದರೆ ಲಾಠಿ ಚಾರ್ಜ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ. ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

Advertisement

ಬೆಂಗಳೂರು ಮೆಟ್ರೊ ಬಂದ್: ಮೇ 4ರವರೆಗೆ ಬೆಂಗಳೂರಿನಲ್ಲಿ ವಾರಾಂತ್ಯಗಳಲ್ಲಿ ಮೆಟ್ರೊ ರೈಲು ಕೂಡ ಸಂಚರಿಸುವುದಿಲ್ಲ. ನಾಡಿದ್ದು ಸೋಮವಾರದಿಂದ ಮೆಟ್ರೊ ಸಂಚಾರ ವಾರದ ದಿನಗಳಲ್ಲಿ 90 ನಿಮಿಷ ಬೇಗನೆ ಬಂದ್ ಆಗುತ್ತದೆ. ಕೊನೆಯ ಮೆಟ್ರೊ ರೈಲು ಬೈಯಪ್ಪನಹಳ್ಳಿಯಿಂದ, ಮೈಸೂರು ರಸ್ತೆ, ನಾಗಸಂದ್ರ ಮತ್ತು ಟಾಟಾ ಸಿಲ್ಕ್ ಇನ್ಸ್ಟಿಟ್ಯೂಟ್ ಗೆ ಸಂಚರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next