Advertisement
ಕರ್ಫ್ಯೂ ನಡುವೆ ಭಾನುವಾರ ಬೆಳಗ್ಗೆ 6 ರಿಂದ 10ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಿದ್ದರ ಹಿನ್ನೆಲೆಯಲ್ಲಿ ನಗರದ ತರಕಾರಿ ಮಾರುಕಟ್ಟೆಯಲ್ಲೂ ಜನ ಖರೀದಿಗೆ ಮುಗಿಬಿದ್ದಿದ್ದು, ವಿವಿಧೆಡೆಅಂಗಡಿಗಳ ಮುಂದೆ ಸಾಮಾಜಿಕ ಅಂತರ ಮರೆತು ಅಗತ್ಯವಸ್ತುಗಳು, ಆಹಾರ ಪದಾರ್ಥಗಳನ್ನು ಕೊಳ್ಳಲುಮುಂದಾಗಿದ್ದರು.
Related Articles
Advertisement
ಬೆಳಗ್ಗೆ 10 ಗಂಟೆಗೆ ಓಡಾಟಕ್ಕೆ ಬ್ರೇಕ್: ಬೆಳಗ್ಗೆ 10ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಿದ್ದ ಪೊಲೀಸರು ನಂತರ ಪ್ರಮುಖ ರಸ್ತೆಳಲ್ಲಿಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದರು. ಈನಡುವೆ ರಸ್ತೆಗಿಳಿದ ಹಲವು ಬೈಕ್‌ಗಳನ್ನು ಸೀಜ್ ಮಾಡಿದಪೊಲೀಸರು, ಕೆಲವು ಕಡೆ ಲಾಠಿ ಬೀಸಿ ಎಚ್ಚರಿಕೆ ನೀಡಿಮನೆಗೆ ಕಳುಹಿಸಿದರು.ವಾರಾಂತ್ಯ ಕರ್ಫ್ಯೂಗೆ ಕೋಲಾರದಲ್ಲಿ ಸಂಪೂರ್ಣಬೆಂಬಲ ವ್ಯಕ್ತವಾಗಿದ್ದು, ಎಸ್‌ಪಿ ಕಾರ್ತಿಕ್‌ರೆಡ್ಡಿ ನೇತೃತ್ವದಲ್ಲಿಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ವಾರಾಂತ್ಯಭಾನುವಾರದ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿದೆ.
ಅಗತ್ಯ ಸೇವೆಗಳಿಗೆ ರಿಯಾಯ್ತಿ: ಆಸ್ಪತ್ರೆ, ಮೆಡಿಕಲ್‌ಸ್ಟೋರ್, ಕೋವಿಡ್ ಟೆಸ್ಟ್, ಲಸಿಕೆ ಹಾಕಿಸಿಕೊಳ್ಳಲುಹೋಗುವ ನಾಗರಿಕರಿಗೆ ಪೊಲೀಸರು ವಿನಾಯಿತಿನೀಡಿದರು. ಭಾನುವಾರವೂ ನಗರದ ಆಸ್ಪತ್ರೆಗಳಲ್ಲಿಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ನೂಕುನುಗಲು ಕಂಡು ಬಂತು.