Advertisement

ವೀಕೆಂಡ್‌ ಕರ್ಫ್ಯೂಗೆ ತಾಳಿಕೋಟೆ ಜನರ ಸಾಥ್‌

08:33 PM Apr 26, 2021 | Girisha |

ತಾಳಿಕೋಟೆ : ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಂತೆ ರವಿವಾರ ಎರಡನೇ ದಿನದ ವಿಕೆಂಡ್‌ ಕರ್ಫ್ಯೂಗೆ ಪಟ್ಟಣದ ಜನರು ಸಂಪೂರ್ಣ ಸಾಥ್‌ ನೀಡಿದ್ದರಿಂದ ಜನಜಂಗುಳಿ ಇಲ್ಲದೇ ಪ್ರಮುಖ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದವು.

Advertisement

ಬೆಳಗಿನ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಬಂದ ಜನ 10 ಗಂಟೆ ವೇಳೆಗೆ ಮನೆ ಸೇರಿಕೊಂಡು ಸರ್ಕಾರದ ನಡೆಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಪ್ರತಿ ಸರ್ಕಲ್‌ಗ‌ಳಲ್ಲಿ ಪೊಲೀಸರು ಬೀಡು ಬಿಟ್ಟದ್ದರಲ್ಲದೇ ಇನ್ನೂ ತುರ್ತು ಸೇವೆಗಳಿಗೆ ಸಂಬಂಧಿಸಿ ಹೋಗುತ್ತಿರುವವರನ್ನು ದಾಖಲೆ ಮತ್ತು ಐಡಿ ಕಾರ್ಡ್‌ಪಡೆದು ವಿಚಾರಿಸಿ ಕಳುಹಿಸಿದರು. ಪ್ರತ್ಯೇಕ ವ್ಯವಸ್ಥೆ: ಕೊರೊನಾ ವೈರಸ್‌ ಎರಡನೇ ಅಲೆ ತನ್ನ ಬಾಹುವನ್ನು ಚಾಚುತ್ತಾ ಸಾಗಿದ್ದರಿಂದ ಸ್ಥಳೀಯ ಪೊಲೀಸ್‌ ಠಾಣೆಗೆ ಬರುವ ಸಾರ್ವಜನಿಕರ ಅಹವಾಲು ಮತ್ತು ವಿಚಾರಣೆಗಾಗಿ ಠಾಣೆ ಹೊರಗಡೆ ಪೆಂಡಾಲ್‌ ಹಾಕಿಸಿ ವ್ಯವಸ್ಥೆ ಮಾಡಲಾಗಿದೆ.

ನಿತ್ಯ ನೂರಾರು ಜನರು ಪೊಲೀಸ್‌ ಠಾಣೆಗೆ ತಮ್ಮ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಬರುವುದನ್ನು ಲಕ್ಷೀಸಿದ ಪಿಎಸೈ ವಿನೋದ ದೊಡಮನಿ ಅವರು ಕೋವಿಡ್‌ ಮಾರ್ಗಸೂಚಿಯಂತೆ ಸಾಮಾಜಿಕ ಅಂತರದೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕಾರ್ಯ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಸಿದ್ಧತೆ: ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ರೈತರಿಗೆ ಹಾಗೂ ಕೊಂಡೊಕೊಳ್ಳುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಅವರ ಸೂಚನೆಯಂತೆ ಆರೋಗ್ಯ ವಿಭಾಗದ ಎಸ್‌.ಎ. ಘತ್ತರಗಿ ತಮ್ಮ ಸಿಬ್ಬಂದಿಯೊಂದಿಗೆ ಸುಣ್ಣದ ಮೂಲಕ ಗೆರೆಗಳನ್ನು 3 ಅಡಿ ಅಂತರದಂತೆ ಹಾಕಿ ಗುರುತಿಸುವ ಕಾರ್ಯ ಕೈಗೊಂಡಿದ್ದಾರೆ. ಮಾರುಕಟ್ಟೆ ಒಳಗಡೆ ಹೋಗುವಾಗ ಕೊಂಡುಕೊಳ್ಳುವಾಗ ಜನ ಜಂಗುಳಿಯಾಗಬಾರದು ಎಂಬ ಸದುದ್ದೇಶದಿಂದ ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next