ಅಂಕೋಲಾ: ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಅಂಕೋಲಾ ಪಟ್ಟಣ ನಗರ ಶನಿವರ ಬಹುತೇಕ ಸ್ತಬ್ಧವಾಗಿತ್ತು.
ಸದಾ ಜನ ಮತ್ತು ವಾಹನಗಳಿಂದ ಗಿಜಿಗುಡುತ್ತಿದ್ದ ಪಟ್ಟಣದ ಮುಖ್ಯರಸ್ತೆಗಳು ಮತ್ತು ಮಾರ್ಕೆಟ್ ರಸ್ತೆ, ಕೆಸಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿದ್ದವು.
ರಸ್ತೆ ಸಾರಿಗೆ ಬಸ್ ಸಂಚಾರ ಇದ್ದರೂ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದ್ದವು . ಕರ್ಫ್ಯೂ ಮಧ್ಯೆ ಕೆಲಸವಿಲ್ಲದೆ ಓಡಾಡುತ್ತಿದ್ದ ಹಲವರು ಪೊಲೀಸರ ಕೈಗೆ ಸಿಕ್ಕಿಬಿದ್ದು ದಂಡ ತೆರಬೇಕಾಯಿತು.
ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಳನ್ನು ಹಾಕಲಾಗಿತ್ತು .ಎಲ್ಲೆಡೆ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು. 2 ನೇ ಶನಿವಾರವಾಗಿದ್ದರಿಂದ ಸಹಜವಾಗಿ ಸರ್ಕಾರಿ ಕಚೇರಿ, ಬ್ಯಾಂಕ್‌ಗೆ ರಜೆ ಇತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ತುರ್ತು ಸೇವೆಗಳಿಗೆ ಬೆರಳೆಣಿಕೆಯಷ್ಟು ಜನ ತಿರುಗಾಡುತ್ತಿದ್ದು ಪೊಲೀಸರಿಗೆ ಸೂಕ್ತ ಸಮಜಾಯಿಸಿ ನೀಡಬೇಕಾಗಿತ್ತು. ಹಣ್ಣು ತರಕಾರಿ ಇನ್ನಿತರ ಕೆಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದರೂ ಖರೀದಿಸುವವರ ಸಂಖ್ಯೆ ವಿರಳವಾಗಿತ್ತು.