Advertisement
ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲದೇ ಗ್ರಾಮಾಂತರ ಪ್ರದೇಶಗಳಲ್ಲೂ ಶುಕ್ರವಾರ ರಾತ್ರಿ 8ರ ಬಳಿಕ ಜನಸಂದಣಿ ಕಡಿಮೆಯಾಗತೊಡಗಿತು. ಹತ್ತು ಗಂಟೆಯ ಬಳಿಕ ಜನಜೀವನ, ಸಂಚಾರ ಬಹುತೇಕ ಸ್ತಬ್ಧಗೊಂಡಿತು. ಇದರ ಮಧ್ಯೆಯೂ ಕಾರು, ದ್ವಿಚಕ್ರ ವಾಹನಗಳಲ್ಲಿ ಬಂದ ಕೆಲವರನ್ನು ಪೊಲೀಸರು ಪ್ರಶ್ನಿಸುತ್ತಿದ್ದುದೂ ಕಂಡು ಬಂದಿತು. ಹಲವೆಡೆ ಬ್ಯಾರಿಕೇಡ್ ಗಳನ್ನು ಹಾಕಿ ಬಂದೋಬಸ್ತ್ ಸಹ ಮಾಡಲಾಗಿದೆ.
ಸೋಮವಾರ ಬೆಳಗ್ಗೆ 5ರ ವರೆಗೆ ಉಭಯ ಜಿಲ್ಲೆಗಳಲ್ಲಿ ತುರ್ತು ಸೇವೆ, ದಿನಸಿ, ಆಹಾರ ವಸ್ತುಗಳ ಮಾರಾಟ, ಹೊಟೇಲ್‌ಗಳಲ್ಲಿ ಪಾರ್ಸೆಲ್ ಮತ್ತು ಅಗತ್ಯ ಸೇವೆಗಳು ಹೊರತುಪಡಿಸಿ ಬೇರೆ ಯಾವುದೇ ಸೇವೆಗಳು ಇರುವುದಿಲ್ಲ. ತುರ್ತು ಸೇವೆ ಒದಗಿಸುವ ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ. ವಕೀಲರಿಗೆ ಶೇ. 50 ರಷ್ಟು ಸಿಬಂದಿ ನಿಯಮದಡಿ ಕಚೇರಿಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ.
Related Articles
Advertisement
ಇದನ್ನೂ ಓದಿ:ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಕೃಷ್ಣಾಪುರ ಮಠಾಧೀಶರ ಭೇಟಿ
ಉಡುಪಿ: ತಪಾಸಣೆಉಡುಪಿ, ಕುಂದಾಪುರ, ಕಾರ್ಕಳ ನಗರ ಪ್ರದೇಶ ಸಹಿತ ವಾಗಿ ಜಿಲ್ಲೆಯ ಗ್ರಾಮೀಣ ಭಾಗದ ಮುಖ್ಯರಸ್ತೆಗಳು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಯ ಪ್ರಮಾಣವನ್ನು 4 ಸಾವಿರದಿಂದ 8 ಸಾವಿರಕ್ಕೆ ಏರಿಸಲಾಗಿದೆ. ಗೋವಾ, ಮಹಾರಾಷ್ಟ್ರ, ಕೇರಳ ಮೊದಲಾದ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ವೀಕೆಂಡ್‌ಕರ್ಫ್ಯೂ
ಶುಕ್ರವಾರ ರಾತ್ರಿ 10ರಿಂದ ವಾರಾಂತ್ಯ ಕರ್ಫ್ಯೂ ಆರಂಭವಾಗಿದ್ದು ಉಭಯ ಜಿಲ್ಲೆಗಳ ವಿವಿಧೆಡೆ ಪೊಲೀಸರು ಬಿಗು ತಪಾಸಣೆ ನಡೆಸಿದರು.