Advertisement
ವಾರಾಂತ್ಯ ಕರ್ಫ್ಯೂಗೆ ಸಂಬಂಧಿಸಿ ಜ. 5ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶದಲ್ಲಿರುವ ಎಲ್ಲ ನಿಯಮಗಳು ಈ ವಾರಾಂತ್ಯ ಕರ್ಫ್ಯೂಗೆ ಅನ್ವಯವಾಗುತ್ತವೆ ಎಂದು ಉಭಯ ಜಿಲ್ಲಾಧಿಕಾರಿ ಗಳಾದ ಡಾ| ರಾಜೇಂದ್ರ ಕೆ.ವಿ. ಮತ್ತು ಕೂರ್ಮಾ ರಾವ್ ತಿಳಿಸಿದ್ದಾರೆ.
Related Articles
Advertisement
ಇದನ್ನೂ ಓದಿ:ವಾರಾಂತ್ಯ ಕರ್ಫ್ಯೂ ಆರಂಭ: ಕಟ್ಟುನಿಟ್ಟಿನ ಜಾರಿಗೆ ಸೂಚನೆ
ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ ಇತ್ಯಾದಿಗಳು ತುರ್ತು ಆವಶ್ಯಕತೆ ಇದ್ದರೆ ಮಾತ್ರ ಕಾರ್ಯ ನಿರ್ವಹಿಸಲಿವೆ. ಐಟಿ ಉದ್ಯಮ ಸೇರಿ ದಂತೆ ಎಲ್ಲ ಕೈಗಾರಿಕೆಗಳಿಗೆ ನಿರ್ಬಂಧದಿಂದ ವಿನಾ ಯಿತಿ ಇದೆ ಮತ್ತು ಅಂತಹ ಸಂಸ್ಥೆಗಳ ನೌಕರರು ಸಂಬಂಧಪಟ್ಟ ಸಂಸ್ಥೆ / ಕಂಪೆನಿ ನೀಡಿದ ಅಧಿಕೃತ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸ ಬೇಕು.
ಕನಿಷ್ಠ ಪುರಾವೆಗಳೊಂದಿಗೆ ರೋಗಿಗಳು ಮತ್ತು ಅವರ ಪರಿಚಾರಕರು / ತುರ್ತು ಅಗತ್ಯತೆಯ ಅವಶ್ಯವಿರುವ ವ್ಯಕ್ತಿಗಳು, ಲಸಿಕೆಯನ್ನು ತೆಗೆದು ಕೊಳ್ಳಲು ಉದ್ದೇಶಿಸಿರುವ ಅರ್ಹ ವ್ಯಕ್ತಿಗಳು ಸಂಚರಿಸಬಹುದು.
ಶುಕ್ರವಾರ ರಾತ್ರಿ 10 ಗಂಟೆಯ ಬಳಿಕ ವಿವಿಧ ಕಡೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ದೃಶ್ಯ ಕಂಡುಬಂತು.
ಕಡಿಮೆ ಬಸ್ ಸಂಚಾರ ಸಾಧ್ಯತೆಕಳೆದ ಶನಿವಾರ ಮತ್ತು ರವಿವಾರ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದ್ದು, ಈ ಹಿನ್ನೆಲೆಯಲ್ಲಿ ಈ ವಾರ ಕಳೆದ ವಾರಕ್ಕಿಂತಲೂ ಕಡಿಮೆ ಸಂಖ್ಯೆಯ ಬಸ್‌ಗಳು ರಸ್ತೆಗಳಿಯಲಿವೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್ ಕಾರ್ಯಾಚರಣೆ ಮಾಡಲಿವೆ ಎಂದು ಖಾಸಗಿ ಬಸ್ ಮಾಲಕರ ಸಂಘದವರು ಮತ್ತು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.