- ಆಹಾರ, ದಿನಸಿ, ಹಣ್ಣು, ತರಕಾರಿಗಳು, ಮೀನು, ಮಾಂಸ, ಹಾಲಿನ ಡೇರಿ, ಹಾಲು ಮಾರಾಟ ಕೇಂದ್ರಗಳು ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅವಕಾಶವಿರುತ್ತದೆ. ಪಾನಿಪುರಿ, ಚಾಟ್ಸ್ ಮುಂತಾದವುಗಳ ಮಾರಾಟಕ್ಕೆ ಅವಕಾಶವಿಲ್ಲ.
- ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಬೆಳಗ್ಗೆ 6ರಿಂದ 2ರ ವರೆಗೆ ಪಾರ್ಸೆಲ್ ಕೊಡಬಹುದು.
- ಹೊಟೇಲ್‌ಗಳಿಂದ ಆಹಾರವನ್ನು ಪಾರ್ಸೆಲ್ ಒಯ್ಯಲು, ಹೋಂ ಡೆಲಿವರಿಗೆ ಮಾತ್ರ ಅವಕಾಶವಿದೆ.
- ಸರಕಾರದ ಕಚೇರಿಗಳು, ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು, ಅಗತ್ಯ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಅವುಗಳ ಸಿಬಂದಿಗೆ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.
- ದೂರವಾಣಿ ಹಾಗೂ ಅಂತರ್ಜಾಲ ಸೇವೆಯ, ತುರ್ತು ಮತ್ತು ಅಗತ್ಯ ಸೇವೆಗ ಳೊಂದಿಗೆ ವ್ಯವಹರಿಸುವ ಮತ್ತು 24/7 ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆಗಳು /ಕಂಪೆನಿಗಳು / ಸಂಸ್ಥೆಗಳ ನೌಕರರು ಗುರುತು ಚೀಟಿ ತೋರಿಸಿ ಸಂಚರಿಸಬಹುದಾಗಿದೆ.
- ಆಸ್ಪತ್ರೆಗೆ ಹೋಗುವವರು, ಲಸಿಕೆ ಪಡೆಯಲು ತೆರಳುವವರು ಸೂಕ್ತ ದಾಖಲೆ ಹೊಂದಿರಬೇಕು.
- ದೂರದ ಬಸ್, ರೈಲು ಮತ್ತು ವಿಮಾನ ಪ್ರಯಾಣಿಕರು, ಅವರನ್ನು ಕರೆದೊಯ್ಯುವ ವರು ಟಿಕೆಟ್ ಇತ್ಯಾದಿ ದಾಖಲೆ ಹೊಂದಿರ ಬೇಕು. ನಿಲ್ದಾಣಗಳಿಂದ ಸಂಚರಿಸುವ ರಿಕ್ಷಾ/ಟ್ಯಾಕ್ಸಿಗಳ ಓಡಾಟವನ್ನು ಅನುಮತಿಸಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Advertisement