ರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರವಾಸಿ ತಾಣಗಳು ಜನರಿಲ್ಲದೇ ಭಣಗುಡುತ್ತಿವೆ.
Advertisement
ಕೋವಿಡ್ ಸೋಂಕು ಕಾಲಿಡುವುದಕ್ಕೂ ಮುನ್ನ ಮೈಸೂರು ಜಿಲ್ಲೆಗೆ ನಿತ್ಯ 10ರಿಂದ 12 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿ ಒಂದೆರೆಡು ದಿನ ತಂಗುತ್ತಿದ್ದರು.ಆದರೆ ಕೋವಿಡ್ ಮೊದಲ ಅಲೆಯ ನಂತರ ಪ್ರವಾಸಿಗರ ಸಂಖ್ಯೆ 4ರಿಂದ 5 ಸಾವಿರಕ್ಕೆ ಇಳಿಕೆಯಾಗಿತ್ತು. ಆದರೆ ಮತ್ತೊಮ್ಮೆ 2ನೇ ಅಲೆಯಿಂದ ಲಾಕ್‌ಡೌನ್ ಹೇರಿದ್ದರಿಂದ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ನೆಲ ಕಚ್ಚಿದ್ದು, ನಿತ್ಯ 2 ಸಾವಿರ ಮಂದಿ ಪ್ರವಾಸಿಗರು ಮಾತ್ರ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.
Related Articles
Advertisement
ಮಾಸ್ಕ್ ಇದ್ದವರಿಗಷ್ಟೇ ಪ್ರವೇಶ:ಮೈಸೂರಿನ ಚಾಮುಂಡಿಬೆಟ್ಟ ಮತ್ತು ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ.
ದೇಗುಲದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿಯಿಂದ ಕೋವಿಡ್ ಮಾರ್ಗಸೂಚಿಸಿ ಪಾಲಿಸುವಂತೆ ಸಲಹೆ ಕೊಡಿಸುವುದು,ಸ್ಯಾನಿಟೈಸರ್ ನೀಡುವುದು ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಶ್ರೀಕಂಠೇಶ್ವರ ದೇವಾಲಯದಲ್ಲಿ ದೇವರ ದರ್ಶ ನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಶ್ರಾವಣಮಾಸ: ದೇಗುಲಗಳಿಗೆ ನಿರ್ಬಂಧಮೈಸೂರು: ಕೋವಿಡ್ ಹಿನ್ನೆಲೆ ನಾಲ್ಕು ಶ್ರಾವಣ ಶನಿವಾರಗಳಂದು ಹಾಗೂ ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರಗಳಂದು
ಮೈಸೂರಿನ ವಿವಿ ಪುರಂನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಸುತ್ತ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮೈಸೂರು ನಗರ ಪೊಲೀಸ್
ಆಯುಕ್ತ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವ ಅವರು ಶ್ರಾವಣ ಮಾಸದ ವಿಶೇಷ ದಿನಗಳಂದು ಮೈಸೂರು ನಗರದ ವಿ.ವಿ.ಪುರಂನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಸುತ್ತಮುತ್ತ 200 ಮೀ.ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೋವಿಡ್ ಆತಂಕವಿರುವ ಹಿನ್ನಲೆಯಲ್ಲಿ ನಾಲ್ಕು ಶ್ರಾವಣ ಶನಿವಾರಗಳಂದು ಹಾಗೂ ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರಗಳಂದು ದೇವಸ್ಥಾನದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆ ಇರುವುದರಿಂದ ಮೊದಲನೇ ಶ್ರಾವಣ ಮಾಸದ ಆ.13, 14, 15ರಂದು ಹಾಗೂ 2ನೇ ಶ್ರಾವಣ ಶುಕ್ರವಾರ ಆ.20, 21, 22 ರಂದು, ಮೂರನೇ ಶ್ರಾವಣ ಮಾಸದ ಆ.27, 28, 29ರಂದು ಹಾಗೂ 4 ನೇ ಶ್ರಾವಣ ಮಾಸದ ಸೆ.03, 04, 05ರಂದು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮಾತ್ರ ಪೂಜೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿ, ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೋವಿಡ್ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ರಜಾ ದಿನ ಹಾಗೂ ಶನಿವಾರ ಮತ್ತು ಭಾನುವಾರ ಪ್ರವಾಸಿಗರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.