Advertisement
ಪಾರ್ಲರಿಗೆ ಹೋಗಿ ಫೇಶಿಯಲ್, ವ್ಯಾಕ್ಸಿಂಗ್… ಇತ್ಯಾದಿ ಮುಗಿಸಿಕೊಂಡು ಬಂದು, ಹಳದಿ ಶಾಸ್ತ್ರ ಇತ್ಯಾದಿ ನಡೆದು, ಎರಡು ಕೈಗಳಿಗೂ ಮೆಹಂದಿ, ಹಸಿರು ಗಾಜಿನ ಬಳೆತೊಟ್ಟು ನಾಳಿನ ಮದುವೆಯ ಕನಸಿನಲ್ಲಿ ಮುಳುಗಿರುವ ಮದುವಣಗಿತ್ತಿ ನಾನು.
Related Articles
Advertisement
ಸೀರೆ ಉಡುವ ಅ ಆ ಇ ಈ ಕೂಡ ಗೊತ್ತಿಲ್ಲ. ಇನ್ನು ಬಂಗಾರ, ಕ್ರೀಮು, ಪೌಡರ್… ಇವ್ಯಾವುದನ್ನೂ ಹೆಚ್ಚು ನಂಬಿ, ಕನ್ನಡಿ ಮುಂದೆ ಹೆಚ್ಚು ಹೊತ್ತು ನಿಂತವಳಲ್ಲ. ಮದುವೆಯಾದವರು ಹೀಗಿರಬೇಕು ಎಂದೆÇÉಾ ಜನರು ಹೇಳುವಾಗ, ನಾನು ಹೇಗೆ ಸಂಸಾರ ನಿಭಾಯಿಸಬಲ್ಲೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು.
ಕಚೇರಿಯ ನೋಟಿಸ್ ಪಿರಿಯಡ್ ಮುಗಿದು ನನಗಾಗಿ ಉಳಿದದ್ದು ಹದಿನೈದೇ ದಿನ. ಅಷ್ಟರೊಳಗೆ, ಅಮ್ಮನೊಂದಿಗೆ ಸೀರೆ, ಬಂಗಾರ ಇತ್ಯಾದಿ ಶಾಪಿಂಗ್ ಮುಗಿಸಿ, ಸೀರೆಗೆ ಫಾಲು, ಗೊಂಡೆ, ರವಿಕೆ ಹೊಲಿಸಲು ಓಡಾಡುವುದರಲ್ಲಿ, ದರ್ಜಿಯ “ಯಾವ ನೆಕ್, ಯಾವುದಕ್ಕೆ ಲೇಸ್’… ಎಂಬೆÇÉಾ ಪ್ರಶ್ನೆಗಳಿಗೆ ಉತ್ತರ ಹುಡುಕಿ ಸುಸ್ತಾಗಿ ಹೋದೆ. “ನಮ್ಮನೆಗೆ ಹಾಲು ಕುಡಿಯಲು ಬಾರೆ’ ಎಂದು ಪಕ್ಕದ ಮನೆಯ ಲೀಲಾ ಆಂಟಿ ಕರೆದದ್ದೇ ತಡ, ನೆರೆಯವರೆಲ್ಲ ನಮ್ಮನೆಗೆ ಊಟಕ್ಕೆ, ಚಹಾಕ್ಕೆ ಬಾರೆ ಎಂದು ಕರೆದು, ಅಪಾಯಿಂಟ್‌ಮೆಂಟ… ಕೊಡಲು ನನ್ನ ತಂಗಿಯನ್ನು ಪಿ.ಎ. ಮಾಡಿಕೊಂಡೆ!
ಹೈದರಾಬಾದಿನಲ್ಲಿರುವ ಅಣ್ಣನ ಮನೆಗೆ ಎರಡು ದಿನದ ಮಟ್ಟಿಗೆ ಹೋಗುತ್ತೇನೆಂದರೆ, ಅಪ್ಪ “ಮದುವೆಯಾದ ಮೇಲೆ ಹೇಗೂ ಅÇÉೇ ಇರುತ್ತೀ. ಬೇಕಾದಾಗ ಹೋಗಿ ಬಾ. ಬೇಕಾದರೆ, ಆಗಲೇ ಅತ್ತಿಗೆ ಬಳಿ ಅಡುಗೆ ಕಲಿತುಕೋ’ ಎಂದರು.ಇಷ್ಟು ದಿನ ನಮ್ಮ ವಾಟ್ಸಾéಪ್ ಗ್ರೂಪ್‌ನಲ್ಲಿ ಮದುವೆಯಾದ ಒಬ್ಬಳೇ ಸದಸ್ಯೆ ಸುಜಾತಾಳನ್ನು “ಆಂಟಿ’ ಎಂದು ಕಾಡಿಸಿದವರಲ್ಲಿ ನಾನೂ ಒಬ್ಬಳು. ಮದುವೆಯ ನಂತರ ನನ್ನನ್ನೂ ಹಾಗೆ ಕರೆಯುತ್ತಾರೆಂಬ ಯೋಚನೆಯೂ ಆ ದಿನಗಳಲ್ಲಿ ಇರಲಿಲ್ಲ. ಮದುವೆಯಾದ ಮೇಲೆ ಅಮ್ಮ, ಅತ್ತೆಯೊಂದಿಗೆ ಫೋನ್‌ನಲ್ಲಿ ಕೇಳಿ ಅಡುಗೆ, ಮನೆಕೆಲಸ ಮಾಡುವ ಪ್ಲಾನ್‌ಗೆ ಸಜ್ಜಾಗಿದ್ದೇನೆ. ನನ್ನ ಮದುವೆಗೆ ಮರೆಯದೇ ಬನ್ನಿ. ಇದು ನನ್ನ ಆತ್ಮೀಯ ಕರೆಯೋಲೆ. – ಸಾವಿತ್ರಿ ಶ್ಯಾನುಭಾಗ