ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Advertisement
ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಜಿಲ್ಲೆಯ ಹೊಸ ಸೇರ್ಪಡೆಗಳು, ಹಬ್ಬಗಳ ಮಾಹಿತಿ, ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ಸಮಗ್ರ ವೆಬ್‌ಸೈಟ್ ಇಂದಿನ ಅಗತ್ಯ ಎಂದ ಅವರು, ಹೊಟೇಲ್ ಅಸೋಸಿಯೇಶನ್ ಅವರು ಪ್ರಚಾರಕ್ಕೆ ನೀಡಲೊಪ್ಪಿರುವ ಹೋರ್ಡಿಂಗ್‌ಗಳ ವಿನ್ಯಾಸವನ್ನು ಅಂತಿಮಪಡಿಸಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಹೋಂ ಸ್ಟೇಗಳನ್ನು ಅಭಿವೃದ್ಧಿಪಡಿಸಲು ಕಾರ್ಯಾಗಾರಗಳನ್ನು ನಡೆಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ ಎಂದು ಸಹಾಯಕ ನಿರ್ದೇಶಕಿ ಅನಿತಾ ಅವರು ಸಭೆಗೆ ತಿಳಿಸಿದರು. ಮಲ್ಪೆ ಸಮೀಪದ ಪಡುಕರೆ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಅದರ ಅನುಮೋದನೆಗಾಗಿ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದ ಅವರು, ಇಲಾಖೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಸಭೆಗೆ ನೀಡಿದರು.
Related Articles
ಮಣಿಪಾಲದ ಮಣ್ಣಪಳ್ಳ ಅಭಿವೃದ್ಧಿ ಬಗ್ಗೆಯೂ ನಡೆದ ಸಭೆಯಲ್ಲಿ ಕೆರೆ ನಿರ್ವಹಣೆ, ಸಮಿತಿ ಹಣಕಾಸಿನ ಸ್ಥಿತಿ ಬಗ್ಗೆ, ಅಭಿವೃದ್ದಿಗೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಮತ್ತು ನಗರಸಭೆಯಿಂದ ನೆರವು ನೀಡಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಮಣ್ಣುಪಳ್ಳವನ್ನು ಆಕರ್ಷಣೀಯ ವನ್ನಾಗಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ ಸಹಿತ ಎಲ್ಲ ಇಲಾಖಾಧಿಕಾರಿಗಳು, ಅಭಿವೃದ್ಧಿಗೆ ಟೆಂಡರ್ ಪಡೆದ ಪ್ರಮುಖರು ಸಭೆಯಲ್ಲಿದ್ದರು.
Advertisement
ಸ್ಕೂಬಾ ಡೈವಿಂಗ್: ಕಾಪು ಸೂಕ್ತಕಾಪು ಕಡಲ ತೀರದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಕ್ರೀಡೆ ನಡೆಸಲು ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸೂಕ್ತ ವೆಂದು ತಿಳಿದುಬಂದಿದೆ. ಅಭಿವೃದ್ಧಿ ಪಡಿಸುವ ಸಂಬಂಧ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್‌ನ ಸಲಹಾಗಾರರಾದ ಕೀರ್ತಿ ಪಾಯಸ್ ಅವರ ಅಭಿಪ್ರಾಯ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.