Advertisement

ಜಾಲತಾಣದ ಬರಹ: ಮಾತಿನ ಚಕಮಕಿ: ಆರೋಪಿಗಳಿಗೆ ಜಾಮೀನು

12:51 AM Mar 20, 2024 | Team Udayavani |

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯದ ಬಗ್ಗೆ ಅಪ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಶಾಸಕರ ಅಭಿಮಾನಿ ಬಳಗವೊಂದು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಸದಸ್ಯ ಜಯಾನಂದ ಅವರ ಮನೆ ವಠಾರಕ್ಕೆ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ನೀಡಿರುವ ದೂರಿನ ಪ್ರಕರಣದಲ್ಲಿ 9 ಮಂದಿಯನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

Advertisement

ಬಂಧಿತರನ್ನು ಕಡಬ ತಾಲೂಕಿನ ಪಾತಾಜೆ ನಿವಾಸಿ ಪ್ರಜ್ವಲ್‌ ರೈ, ವಿಟ್ಲ ಕಂಬಳಬೆಟ್ಟು ನಿವಾಸಿ ಸುಶಾಂತ್‌ ಶೆಟ್ಟಿ, ಪುತ್ತೂರಿನ ಆರ್ಯಾಪು ನಿವಾಸಿ ಸನತ್‌ ರೈ, ಬಲಾ°ಡು ನಿವಾಸಿ ರೋಹಿತ್‌ ನಾಯ್ಕ, ಸಾಮೆತಡ್ಕ ನಿವಾಸಿ ಅಖೀಲ್‌, ಆರ್ಯಾಪು ನಿವಾಸಿ ಕೀರ್ತನ್‌ ರೈ, ಬನ್ನೂರು ನಿವಾಸಿ ಸರ್ವೆàಶ್‌ ರಾಜ್‌ ಅರಸ್‌, ವಿಟ್ಲ ಕಂಬಳಬೆಟ್ಟು ನಿವಾಸಿ ಸುಮಿತ್‌ ಶೆಟ್ಟಿ ಎಂದು ಗುರುತಿಸಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ
ಜಯಾನಂದ ಅವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಮಾ. 19ರಂದು ಭೇಟಿ ನೀಡಿ ಮಾಹಿತಿ ಪಡೆದರಲ್ಲದೇ ಮನೆ ಮಂದಿಗೆ ಧೈರ್ಯ ತುಂಬಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭೇಟಿ ನೀಡಿ, ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಆರೋಪಿಗಳನ್ನು ಬಂಧನ ಮಾಡಿ ಯಾವ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದೀರಿ ಎಂದು ನಗರ ಠಾಣಾ ಪೊಲೀಸ್‌ ಅಧಿಕಾರಿಗೆ ಕರೆ ಮಾಡಿ ಪ್ರಶ್ನಿಸಿದ ಘಟನೆ ನಡೆಯಿತು.

ಈ ಸಂದರ್ಭ ಸ್ಥಳೀಯ ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಬಿಜೆಪಿ ಪುತ್ತೂರು ನಗರ ಮಂಡಲ ಕಾರ್ಯದರ್ಶಿ ಅಶೋಕ್‌ ಹಾರಡಿ, ಬಿಜೆಪಿ ಮಾಜಿ ಹಿಂದುಳಿದ ವರ್ಗಗಳ ಸದಸ್ಯ ಪುರುಷೋತ್ತಮ ಬಂಗೇರ, ಮತ್ತು ಕಾರ್ಯಕರ್ತರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next