Advertisement
ಬಂಧಿತರನ್ನು ಕಡಬ ತಾಲೂಕಿನ ಪಾತಾಜೆ ನಿವಾಸಿ ಪ್ರಜ್ವಲ್ ರೈ, ವಿಟ್ಲ ಕಂಬಳಬೆಟ್ಟು ನಿವಾಸಿ ಸುಶಾಂತ್ ಶೆಟ್ಟಿ, ಪುತ್ತೂರಿನ ಆರ್ಯಾಪು ನಿವಾಸಿ ಸನತ್ ರೈ, ಬಲಾ°ಡು ನಿವಾಸಿ ರೋಹಿತ್ ನಾಯ್ಕ, ಸಾಮೆತಡ್ಕ ನಿವಾಸಿ ಅಖೀಲ್, ಆರ್ಯಾಪು ನಿವಾಸಿ ಕೀರ್ತನ್ ರೈ, ಬನ್ನೂರು ನಿವಾಸಿ ಸರ್ವೆàಶ್ ರಾಜ್ ಅರಸ್, ವಿಟ್ಲ ಕಂಬಳಬೆಟ್ಟು ನಿವಾಸಿ ಸುಮಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಜಯಾನಂದ ಅವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾ. 19ರಂದು ಭೇಟಿ ನೀಡಿ ಮಾಹಿತಿ ಪಡೆದರಲ್ಲದೇ ಮನೆ ಮಂದಿಗೆ ಧೈರ್ಯ ತುಂಬಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭೇಟಿ ನೀಡಿ, ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಆರೋಪಿಗಳನ್ನು ಬಂಧನ ಮಾಡಿ ಯಾವ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದೀರಿ ಎಂದು ನಗರ ಠಾಣಾ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ಪ್ರಶ್ನಿಸಿದ ಘಟನೆ ನಡೆಯಿತು. ಈ ಸಂದರ್ಭ ಸ್ಥಳೀಯ ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಬಿಜೆಪಿ ಪುತ್ತೂರು ನಗರ ಮಂಡಲ ಕಾರ್ಯದರ್ಶಿ ಅಶೋಕ್ ಹಾರಡಿ, ಬಿಜೆಪಿ ಮಾಜಿ ಹಿಂದುಳಿದ ವರ್ಗಗಳ ಸದಸ್ಯ ಪುರುಷೋತ್ತಮ ಬಂಗೇರ, ಮತ್ತು ಕಾರ್ಯಕರ್ತರು ಜತೆಗಿದ್ದರು.