Advertisement

ಶರಣಬಸವ ವಿವಿಯಲ್ಲಿ ವೆಬಿನಾರ್‌

06:05 PM Nov 15, 2021 | Team Udayavani |

ಕಲಬುರಗಿ: ಮಹಾದಾಸೋಹ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಮಾತೋಶ್ರೀ ಡಾ| ದಾಕ್ಷಾಯಿಣಿ ಅವ್ವ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಜನ್ಮದಿನಾಚರಣೆ ನಿಮಿತ್ತ ಶರಣಬಸವ ವಿಶ್ವವಿದ್ಯಾಲಯದ ಇಂಗ್ಲಿಷ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಷೆಕ್ಸ್ ಪಿಯರ್‌ ನಾಟಕಗಳಲ್ಲಿ ಮಾನವೀಯ ದೃಷ್ಟಿಕೋನ ಕುರಿತು ಒಂಭತ್ತು ದಿನಗಳ ವೆಬಿನಾರ್‌ ಆಯೋಜಿಸಿದೆ.

Advertisement

ವೆಬಿನಾರ್‌ ಉದ್ಘಾಟಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯ ಉಪಕುಲಪತಿ ಡಾ| ನಿರಂಜನ್‌ ವಿ.ನಿಷ್ಠಿ, ಮಹಾನ್‌ ಅಮರ ಕವಿ ಮತ್ತು ನಾಟಕಕಾರ ಷೆಕ್ಸ್‌ಪಿಯರ್‌ ಇಂದಿಗೂ ಪ್ರಸ್ತುತವಾಗಿದ್ದು, ಆಧುನಿಕ ಕಾಲಘಟ್ಟದಲ್ಲಿ ಇಂಗಿಷ್‌ ಭಾಷೆ ಮತ್ತು ಸಾಹಿತ್ಯ ಅಧ್ಯಯನಕ್ಕೆ ಅದರಲ್ಲೂ ವಿಲಿಯಂ ಷೆಕ್ಸ್‌ಪಿಯರ್‌ನ ನಾಟಕಗಳ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದು ಹೇಳಿದರು.

ಗೌರವ ಅತಿಥಿ, ಸಮ ಕುಲಪತಿ ಪ್ರೊ| ವಿ.ಡಿ. ಮೈತ್ರಿ ಮಾತನಾಡಿ, ಇಂಗ್ಲಿಷ್ ವಿಭಾಗವು ಇಂಗ್ಲಿಷ್ ಮಾತ್ರವಲ್ಲದೇ ಇತರ ವಿಭಾಗಗಳ ವಿದ್ಯಾರ್ಥಿಗಳಿಗೆ ಕಲಿಕೆಯ ವೇದಿಕೆ ಒದಗಿಸುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ ಮಾತನಾಡಿ, ತಮ್ಮ ವಿದ್ಯಾರ್ಥಿ ದಿನಗಳನ್ನು ಹಾಗೂ ಷೆಕ್ಸ್‌ಪಿಯರ್‌ ಅಧ್ಯಯನವನ್ನು ಸ್ಮರಿಸಿದರು. ಶರಣಬಸವ ವಿಶ್ವವಿದ್ಯಾಲಯವು ಬಹು ವಿಭಾಗಗಳಿಗೆ ಹೆಸರು ವಾಸಿಯಾಗಿರುವುದರಿಂದ ತಾಂತ್ರಿಕ ಶಿಕ್ಷಣ ಮತ್ತು ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳು ಜೊತೆಯಲ್ಲಿ ಸಾಗಬೇಕು ಎಂಬ ಅಂಶವನ್ನು ಹೇಳಿದರು. ವಿಜ್ಞಾನ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next