Advertisement

ಮಾಹೆ ಗಾಂಧಿಯನ್ ಸೆಂಟರ್ : ನೊಬೆಲ್ ಪುರಸ್ಕೃತರ ಕೊಡುಗೆಯ ವಿಚಾರಗೋಷ್ಠಿ

07:38 PM Dec 02, 2021 | Team Udayavani |

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವರ್ಷದ ನೊಬೆಲ್ ಪ್ರಶಸ್ತಿ ಪುರಸ್ಕೃತರ ಕೊಡುಗೆಯ ವಿವಿಧ ಆಯಾಮಗಳ ಕುರಿತ ವಿಚಾರಗೋಷ್ಠಿಯನ್ನು ಗುರುವಾರ ನಡೆಸಿಕೊಟ್ಟರು.

Advertisement

ವೆಬಿನಾರ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹವಾಮಾನ ಬದಲಾವಣೆ, ವಸಾಹತೋತ್ತರ ಸಾಹಿತ್ಯ , ಪತ್ರಿಕೋದ್ಯಮ, ಶಾಂತಿ ಮತ್ತು ಪರ್ಯಾಯ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರ ಕಾರ್ಯಗಳು ನಮ್ಮ ಸಮಕಾಲೀನ ಜೀವನಕ್ಕೆ ಹೇಗೆ ಕೊಡುಗೆಯಾಗಿದೆ ಎಂಬುದರ ಕುರಿತು ಮಾತನಾಡಿದರು.

ಅಭಿನಯ (ಭೌತಶಾಸ್ತ್ರ), ಅಪರ್ಣಾ ಪರಮೇಶ್ವರನ್ (ಸಾಹಿತ್ಯ), ಜಯದೀಪ್ ಜಯೇಶ್ (ಶಾಂತಿ), ಶಿಖಾ ರಾಣಾ (ಅರ್ಥಶಾಸ್ತ್ರ) ನೊಬೆಲ್ ಪುರಸ್ಕ್ರತರ ಕುರಿತ ತಮ್ಮ ಪ್ರಬಂಧಗಳನ್ನು ಮಂಡಿಸಿದರು.

ಜಿಸಿಪಿಎಎಸ್ ಮುಖ್ಯಸ್ಥರಾದ ಪ್ರೊ.ವರದೇಶ್ ಹಿರೇಗಂಗೆ, ಪ್ರೊ.ಮನು ಚಕ್ರವರ್ತಿ, ಪ್ರೊ.ಫಣಿರಾಜ್ ಪ್ರಬಂಧಗಳಿಗೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next