Advertisement

ಜಾಲತಾಣ ವೀರರೇ, ಯುದ್ಧ ಭೂಮಿಯಲ್ಲಿ ಹೋರಾಡಿ

01:10 AM Mar 04, 2019 | Team Udayavani |

“ಸಾಮಾಜಿಕ ಜಾಲತಾಣಗಳ ವೀರರೇ, ನಿಮಗೆ ಯುದ್ಧ ಬೇಕೆಂದರೆ ದಯವಿಟ್ಟು ಸೇನೆಗೆ ಸೇರಿ, ರಣಾಂಗಣದಲ್ಲಿ ಹೋರಾಡಿ.’ ಹುತಾತ್ಮ ಯೋಧರೊಬ್ಬರ ಪತ್ನಿ ಆಡಿರುವ ಆಕ್ರೋಶದ ನುಡಿಗಳಿವು. ಜಮ್ಮು-ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಕಳೆದ ವಾರ ಪತನಕ್ಕೀಡಾದ ಎಂಐ-17 ಕಾಪ್ಟರ್‌ನಲ್ಲಿದ್ದ ವಾಯುಪಡೆ ಅಧಿಕಾರಿ, ಸ್ಕ್ವಾಡ್ರನ್‌ ಲೀಡರ್‌ ನಿನಾದ್‌ ಮಂಡವಾYನೆ (33) ಅವರ ಅಂತ್ಯಸಂಸ್ಕಾರ ನಡೆದ ಮಾರನೇ ದಿನ ಸುದ್ದಿಗಾರರ ಜತೆ ಅವರ ಪತ್ನಿ ವಿಜೇತಾ ಆಡಿರುವ ಮಾತುಗಳಿವು.

Advertisement

“ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ನಡೆಯುತ್ತಿದೆ. ಮಾಧ್ಯಮಗಳು ಕೆಲವೊಮ್ಮೆ ಜವಾಬ್ದಾರಿ ಯುತವಾಗಿ ವರ್ತಿಸಿದರೆ, ಮತ್ತೆ ಕೆಲವೊಮ್ಮೆ ಸಂಪೂರ್ಣ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಸುಖಾಸುಮ್ಮನೆ ಯುದ್ಧ ಬೇಕೆಂದು ಅರಚಾಡುವ ನೀವು, ನನ್ನ ಪತಿ ನಿನಾದ್‌ಗೋಸ್ಕರ, ವಿಂಗ್‌ ಕಮಾಂಡರ್‌ ಅಭಿನಂದನ್‌ಗೊàಸ್ಕರ ಅಥವಾ ಹುತಾತ್ಮರಿಗೋಸ್ಕರ ಒಂದು ಕೆಲಸ ಮಾಡಿ. ಒಂದೋ ನೀವು ಸೇನೆಗೆ ಸೇರಿ ಅಥವಾ ನಿಮ್ಮ ಕುಟುಂಬದ ಯಾರಾದರೊಬ್ಬ ಸದಸ್ಯರನ್ನು ಸೇನೆಗೆ ಸೇರಿಸಿ. ಅದು ಸಾಧ್ಯವಾಗದಿದ್ದರೆ, ನಿಮ್ಮ ಸುತ್ತಮುತ್ತಲೂ ಸಣ್ಣಪುಟ್ಟ ಸಕಾರಾತ್ಮಕ ಬದಲಾವಣೆಯನ್ನಾದರೂ ಮಾಡಿ’ ಎಂದು ವಿಜೇತಾ ಹೇಳಿದ್ದಾರೆ. 

“ನಮಗೆ ಯುದ್ಧ ಬೇಡ. ನಿಮಗೆ ಯುದ್ಧದಿಂದಾಗುವ ಹಾನಿ ಬಗ್ಗೆ ಗೊತ್ತಿಲ್ಲ. ನಿನಾದ್‌ರಂಥ ಯೋಧರನ್ನು ಕಳೆದುಕೊಳ್ಳಲು ನಾವು ಇಷ್ಟಪಡುವುದಿಲ್ಲ. ಅಷ್ಟಕ್ಕೂ ಸಾಮಾಜಿಕ ಜಾಲತಾಣಗಳ ವೀರರಾದ ನಿಮಗೆ ಯುದ್ಧ ಬೇಕೆಂದಾದರೆ, ಹೋಗಿ ರಣಾಂಗಣದಲ್ಲಿ ಹೋರಾಡಿ’ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ ವಿಜೇತಾ.

Advertisement

Udayavani is now on Telegram. Click here to join our channel and stay updated with the latest news.

Next