Advertisement

ಮಾಸ್ಕ್ ಧರಿಸದಿದ್ರೆ 5000 ರೂ. ದಂಡ ಇಲ್ಲವೇ ಮೂರು ವರ್ಷ ಜೈಲು: ಅಹ್ಮದಾಬಾದ್ ನಗರಾಡಳಿತ

09:29 AM Apr 13, 2020 | Nagendra Trasi |

ನವದೆಹಲಿ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಹ್ಮದಾಬಾದ್ ನಗರಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಏಪ್ರಿಲ್ 13ರಿಂದ ಜನರು ಮಾಸ್ಕ ಧರಿಸುವುದು ಕಡ್ಡಾಯ ಎಂದು ಘೋಷಿಸಿದೆ. ಒಂದು ವೇಳೆ ಮಾಸ್ಕ್ ಧರಿಸದೇ ಇದ್ದರೆ 5 ಸಾವಿರ ರೂಪಾಯಿ ದಂಡ ಅಥವಾ ಮೂರು ವರ್ಷಗಳ ಜೈಲುಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಾರಣಾಂತಿಕ ಕೋವಿಡ್ 19 ವೈರಸ್ ಹರಡದಂತೆ ತಡೆಯಲು ಸೋಂಕು ರೋಗ ಕಾಯ್ದೆಯಡಿ ಈ ಆದೇಶ ಹೊರಡಿಸಲಾಗಿದೆ ಎಂದು ಅಹ್ಮದಾಬಾದ್ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ನೆಹ್ರಾ ಭಾನುವಾರ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 6ಗಂಟೆಯಿಂದ ಅಹ್ಮದಾಬಾದ್ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಕ್ಕೆ ಬರುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರಿಗೆ ಐದು ಸಾವಿರ ರೂಪಾಯಿ ದಂಡ. ಒಂದು ವೇಳೆ ಯಾರು ದಂಡ ಕಟ್ಟಲು ವಿಫಲರಾಗುತ್ತಾರೋ ಅವರು ಮೂರು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕು ಎಂದು ನೆಹ್ರಾ ವಿವರಿಸಿದ್ದಾರೆ.

ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಸ್ಕ ಅಥವಾ ಮನೆಯಲ್ಲಿ ಬಟ್ಟೆಯಿಂದ ತಯಾರಿಸಿದ ಅಥವಾ ಹ್ಯಾಂಡ್ ಕರ್ಚೀಫ್ ಅನ್ನು ಮೂಗು, ಬಾಯಿ ಮುಚ್ಚುವಂತೆ ಕಟ್ಟಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next