ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತದೆಂದು ಹೇಳಿದ್ದೆ. ಈಗ 20 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ, ಅಚ್ಚರಿ ಸೀಟು ಬರುತ್ತದೆ ಕಾದು ನೋಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ ಎನ್ನುತ್ತಾರೆ, ಆದರೆ 400 ಅಲ್ಲ 150 ಸ್ಥಾನವನ್ನೂ ದಾಟುವುದಿಲ್ಲ ಎಂದು ವ್ಯಂಗ್ಯವಾಡಿದರು.
ಐಎನ್‌ಡಿ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹೋರಾಟ ಭಾರತೀಯ ಜನರ ಜೀವನದ್ದಾಗಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ನಾವೆಲ್ಲರೂ ಬಯಸುತ್ತೇವೆ ಎಂದರು.
ಒಬಿಸಿ, ಎಸ್ಸಿ, ಎಸ್ಟಿ ವಿರೋಧ ಮಾಡುವುದು ಬಿಜೆಪಿ ಡಿಎನ್ಎ. ಮೋದಿ ಸರ್ಕಾರ ಸಂವಿಧಾನ ಮುಗಿಸುವ ಕೆಲಸ ಮಾಡುತ್ತಿದೆ ಎಂದ ಅವರು, ಬಿಜೆಪಿಯವರು ಹೆಣೆದ ಮೇಲೆ ರಾಜಕೀಯ ಮಾಡುತ್ತಿದೆ. ಬಿಜೆಪಿಯವರಿಗೆ ನಾಚಿಗೆ ಆಗಬೇಕು, ಆರೋಪಿ ಯಾವುದೇ ಸಮುದಾಯವಾದರೂ ಗಲ್ಲು ಶಿಕ್ಷೆಯಾಗಬೇಕು. ಈಗಾಗಲೇ ನಮ್ಮ ಸರ್ಕಾರ ಸಿಐಡಿಗೆ ಕೇಸ್ ವಹಿಸಿದೆ. ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ವಿಚಾರಣೆ ಮಾಡಬೇಕು. ಸರ್ಕಾರವೇ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತದೆ ಎಂದರು.
ಕಳಸಾ ಬಂಡೂರಿಗೆ ಪರಿಸರ ಅನುಮತಿ ಸಿಗುತ್ತಿಲ. ಒಂದು ವರ್ಷದಿಂದ ಅನುಮತಿ ಕೊಡುತ್ತಿಲ್ಲ. ಬೇಧಭಾವ ಏಕೆ ಮಾಡುತ್ತಿದ್ದೀರಿ? ಮೋದಿ ಅಮಿತ್ ಶಾ ಕರ್ನಾಟಕಕ್ಕೆ ಬರಬೇಡಿ. ಈ ನೆಲದ ಮೇಲೆ ಕಾಲಿಡುವ ಅಧಿಕಾರವಿಲ್ಲ. ಕರ್ನಾಟಕದ ಹಣ ಪಡೆದವರು ಈಗ ರೈತರಿಗೆ, ನೀರಾವರಿ ಯೋಜನೆಗೆ ಸ್ಪಂದಿಸುತ್ತಿಲ್ಲ. ಕರ್ನಾಟಕದಲ್ಲಿ ದ್ವೇಷದ ರಾಜಕಾರಣ ಒಡೆದಾಳುವ ನೀತಿ ಬೇಡ. ಅಮಿತ್ ಶಾ, ಮೋದಿ ಬಂದರೆ ಗೋ ಬ್ಯಾಕ್ ಘೋಷಣೆ ಕೂಗು ಕೇಳಿ ಬರಲಿದೆ. ಖಾಲಿ ಚೊಂಬು ಮೋದಿ ಮಾಡೆಲ್ ಆಗಿದೆ. ಈ ಚೊಂಬು ಮೋದಿಗೆ ವಾಪಸ್ ನೀಡಲಾಗುವುದು. ಮೋದಿ ಹೆದರಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.