Advertisement
ಪಾಕ್ ಸರಕಾರ ಸ್ಕರ್ಡು, ಗಿಲ್‌ಗಿಟ್ ಬಾಲ್ಟಿಸ್ಥಾನ್ ಪ್ರಾಂತ್ಯದ ಮೇಲೆ ಹೇರಿರುವ ಅನುಚಿತ, ಅನಪೇಕ್ಷಿತ ಮತ್ತು ಕಾನೂನು ಬಾಹಿರ ತೆರಿಗೆ ಕ್ರಮವನ್ನು ವಿರೋಧಿಸಿ ಈ ಪ್ರಾಂತ್ಯದ ಭಾರೀ ಸಂಖ್ಯೆ ಜನರು, ಸಣ್ಣ ವ್ಯಾಪಾರಸ್ಥರು ಮತ್ತು ಉದ್ಯಮಿಗಳು ಇಂದು ಶನಿವಾರ ಬೀದಿಗಿಳಿದು ಪ್ರತಿಭಟನೆ, ಪ್ರದರ್ಶನ, ಮೆರವಣಿಗೆ ನಡೆಸಿ ಪಾಕ್ ವಿರೋಧಿ ಘೋಷಣೆಗಳನ್ನು ಕೂಗಿದರು.
#WATCH: Massive anti-Pakistan protests across Gilgit Baltistan against illegal taxation #Skardu pic.twitter.com/Zwei7MZaKO — ANI (@ANI) November 18, 2017
Related Articles
Advertisement
ಪಾಕಿಸ್ಥಾನ ಈ ಕಾನೂನು ಬಾಹಿರ ತೆರಿಗೆ ಉಪಕ್ರಮವನ್ನು ನಿಶ್ಶರ್ತವಾಗಿ ಹಿಂದೆಗೆದುಕೊಳ್ಳುವ ವರೆಗೆ ನಾವಿನ್ನು ಇದೇ ರೀತಿಯ ತೀವ್ರತಮ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಉದ್ಯಮಿಯೋರ್ವರು ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
ಕಳೆದ ಅ.22ರ,ದ ಪಿಓಕೆ ಮತ್ತು ಗಿಲ್‌ಗಿಟ್ ಬಾಲ್ಟಿಸ್ಥಾನ್ ಆದ್ಯಂತ ಜನರು ಬೃಹತ್ ಪಾಕ್ ವಿರೋಧಿ ಪ್ರತಿಭಟನೆ, ಪ್ರದರ್ಶನ, ಮೆರವಣಿಗೆ ನಡೆಸಿ ಕರಾಳ ದಿನವನ್ನು ಆಚರಿಸಿದ್ದರು.
ಈ ರೀತಿಯ ಪ್ರತಿಭಟನೆಗಳು ಮುಝಫರಾಬಾದ್, ರಾವಲ್‌ಕೋಟ್, ಕೋಟ್‌ಲಿ, ಗಿಲ್‌ಗಿಟ್ ಮತ್ತು ಹಜೀರಾ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಡೆದಿದ್ದವು.