Advertisement

100% ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುತ್ತೇವೆ : ಸಚಿವ ಮಧು ಬಂಗಾರಪ್ಪ

05:20 PM Jun 03, 2023 | Team Udayavani |

ಶಿವಮೊಗ್ಗ: ಪಠ್ಯ ಪುಸ್ತಕಗಳ ಪರಿಷ್ಕರಣೆ 100% ಮಾಡುಮಾಡುತ್ತೆವೆ, ಯಾವುದೇ ಗೂಂದಲವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಮಕ್ಕಳಿಗೆ ಅವಶ್ಯಕತೆ ಏನೀದೆ ಅದನ್ನು ನೀಡುತ್ತೆವೆ.ಮಕ್ಕಳಿಗೆ ಏನು ಬೇಕು ಅದನ್ನು ನೀಡುತ್ತೆವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಆಗುತ್ತದೆ ಎಂದು ತಿಳಿಸಿದ್ದೆವು .ಈಗಾಗಲೇ ಪಠ್ಯ ಪುಸ್ತಕ ಶಾಲೆಗಳಿಗೆ ಹೋಗಿದೆ.
ಅದನ್ನು ತಡೆಯಲು ಅಗಲಿಲ್ಲ ಎಂದರು.

ನಾನು ಅಧಿಕಾರ ತೆಗೆದುಕೊಂಡಾಗ ಪಠ್ಯ ಪುಸ್ತಕ ಹೋಗಿ ಅಗಿತ್ತು.ಅದಕ್ಕೆ ಕಾನೂನು ಬದ್ದವಾಗಿ ತಡೆಯುವ ವ್ಯವಸ್ಥೆ ಇದೆ ಎಂದರು. ಬರಗೂರು ರಾಮಚಂದ್ರಪ್ಪನವರ ಜೊತೆ ಚರ್ಚೆ ನಡೆಸಲಾಗಿದೆ. ಸಿಎಂ ರವರ ನೇತೃತ್ವದಲ್ಲಿ ಎಲ್ಲಾ ನಡೆಯುತ್ತಿದೆ. ಅವರ ಆಸೆ ಸಹ ಪಠ್ಯ ಪುಸ್ತಕ ಬದಲಾವಣೆ ಮಾಡಬೇಕೆಂದು ಇದೆ ಎಂದರು.

ಮಕ್ಕಳ ಭವಿಷ್ಯಕ್ಕಾಗಿ ಏನು ಬದಲಾವಣೆ ಮಾಡಬೇಕೋ ಅದನ್ನು ಮಾಡೇ ಮಾಡುತ್ತೆವೆ.ಅದರಲ್ಲಿ ಏನೂ ಬದಲಾವಣೆ ಇಲ್ಲ ಎಂದರು.

ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಾನು ಮಾಹಿತಿ ಪಡೆದುಕೊಂಡಿದ್ದೆನೆ.ಎಲ್ಲಾ ವಾತಾವರಣ ಚೆನ್ನಾಗಿದೆ. ಸ್ವಲ್ಪ ಆಡಳಿತವನ್ನು ಒಂದು ಹಂತಕ್ಕೆ ತರಬೇಕಿದೆ. ಉತ್ತಮ ಅಧಿಕಾರಿಗಳು, ಶಿಕ್ಷಕರು ಹಾಗೂ ಮಕ್ಕಳಿದ್ದಾರೆ, ಪೋಷಕರು ಇದ್ದಾರೆ ಎಲ್ಲವನ್ನು ಸರಿಮಾಡೋಣ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next