ಮಂಗಳೂರು :‘ಸಿದ್ದರಾಮಯ್ಯ ಸರ್ಕಾರ ಹಲವು ಭ್ರಷ್ಟಾಚಾರಗಳನ್ನು ಮಾಡಿದ್ದು ಬೆಳಗಾವಿ ಅಧಿವೇಶನಲ್ಲಿ ದಾಖಲೆ ಸಮೇತ ಬಯಲು ಮಾಡುತ್ತೇವೆ’ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.’ಡ್ರಗ್ ಮಾಫಿಯಾ ಸರ್ಕಾರವನ್ನು ನಿಯಂತ್ರಿಸುತ್ತಿದೆ’ಎಂದು ಆರೋಪಿಸಿದರು.
‘ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಲೈಂಗಿಕ ಹಗರಣ ಜಗಜ್ಜಾಹೀರಾಗಿದೆ. ಅವರನ್ನು ಕೂಡಲೇ ಸ್ಥಾನದಿಂದ ಕೈಬಿಡಲಿ. ಅವರದ್ದು ತಪ್ಪಿಲ್ಲ ಎಂದಾದರೆ ಸಿಬಿಐ ತನಿಖೆ ನಡೆಸಲಿ’ ಎಂದು ಸವಾಲೆಸೆದರು.
ಇದೇ ವೇಳೆ ‘ರಾಜ್ಯಕ್ಕೆ ಐಸಿಸ್ ನಂಟು ಇರುವುದು ಜನರಲ್ಲಿ ಭಯ ಹುಟ್ಟಿಸಿದೆ. ನಮ್ಮ ಸರ್ಕಾರ ಬಂದರೆ ಮೂರು ತಿಂಗಳಿನ ಒಳಗೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಸ್ಥಾಪಿಸುತ್ತೇವೆ’ ಎಂದರು.
‘ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ರವಾನಿಸುತ್ತೇವೆ’ ಎಂದರು.
‘ಪರಿವರ್ತನಾ ಯಾತ್ರೆಯಲ್ಲಿ ನನಗೆ ಸಿಕ್ಕ ಸ್ವಾಗತ ಆನೆಯ ಬಲ ತಂದಿದೆ’ ಎಂದರು.