Advertisement
ಇದಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕು. ಕೇಂದ್ರದವರು ಯಾವ ರಾಜ್ಯಕ್ಕೂ ಹಣ ಕೊಟ್ಟಿಲ್ಲ. ಹಾಗಂತ ನಾವು ಕಾದು ಕುಳಿತಿಲ್ಲ. ನಮ್ಮ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ. ಆದರೆ ಈ ವಿಚಾರವಾಗಿ ವಿರೋಧ ಪಕ್ಷಗಳು ಬೊಬ್ಬೆ ಹಾಕುವುದು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
Related Articles
Advertisement
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ನನ್ನ ನಡುವೆ ಗುಲಗಂಜಿಯಷ್ಟು ಭಿನ್ನಾಭಿಪ್ರಾಯ ಇಲ್ಲ ಎಂದು ಮುಖ್ಯಂಮತ್ರಿ ಯಡಿಯೂರಪ್ಪ ಹೇಳಿದರು.
ಇಬ್ಬರು ಪರಸ್ಪರ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಿದ್ದೇವೆ. ಕೆಲವು ಮಾಧ್ಯಮಗಳಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವರದಿ ಬಂದಿದ್ದು ಅದರಲ್ಲಿ ಸತ್ಯಾಂಶ ಇಲ್ಲ. ನಾವು ಇಬ್ಬರು ಸರಿ ಇದ್ದೇವೆ. ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಇಬ್ಬರೂ ಚರ್ಚೆ ಮಾಡಿಯೇ ತೀರ್ಮಾನ ಮಾಡಿದ್ದೇವೆ ಎಂದರು.