Advertisement

ಎರಡು ದಿನದೊಳಗೆ ಬ್ರಿಟನ್ ನಿಂದ ಬಂದವರನ್ನು ಪತ್ತೆ ಹಚ್ಚುತ್ತೇವೆ: ಸಚಿವ ಸುಧಾಕರ್

01:50 PM Dec 28, 2020 | keerthan |

ಬೆಂಗಳೂರು: ಬ್ರಿಟನ್ ನಿಂದ ‌ಬಂದವರನ್ನು ಎರಡು ದಿನ‌ದೊಳಗೆ ಪತ್ತೆ ಹಚ್ಚಲಾಗುತ್ತದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಆರೋಗ್ಯ ಸಚಿವ ಸುಧಾಕರ್ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯು.ಕೆಯಿಂದ ಬಂದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇವೆ.  ಎರಡು ದಿನಗಳೊಳಗೆ ಅವರನ್ನು ಪತ್ತೆ ಹಚ್ಚಲಾಗುತ್ತದೆ ಎಂದರು.

ಇದನ್ನೂ ಓದಿ:ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿ: ಸಚಿವ ಪ್ರಭು ಚವ್ಹಾಣ್

ಡಿ.30, 31ರಂದು ಹೊಸ ವರ್ಷವನ್ನು ಸರಳವಾಗಿ, ಅರ್ಥಗರ್ಭಿತವಾಗಿ ಆಚರಿಸಬೇಕು. ವಿಸ್ತೃತ ಮಾರ್ಗಸೂಚಿ ಬಗ್ಗೆ ಚರ್ಚೆ ಮಾಡಿದ್ದೇವೆ. ಗೃಹ ಇಲಾಖೆಯಿಂದ ಸಂಜೆ ಸಂಪೂರ್ಣ ಮಾರ್ಗಸೂಚಿ ಬಿಡುಗಡೆ ಆಗಲಿದೆ. ಬೆಂಗಳೂರು ಮತ್ತು ಬೇರೆ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next