Advertisement

“10 ಶಾಸಕರಿಗೆ ಅವರ 20 ಶಾಸಕರನ್ನು ಸೆಳೆಯುತ್ತೇವೆ’

11:27 PM May 10, 2019 | Team Udayavani |

ಹುಬ್ಬಳ್ಳಿ: “ನಮ್ಮ ಹತ್ತು ಶಾಸಕರಿಗೆ ಕೈ ಹಾಕಿದರೆ, ನಾವು ಅವರ ಇಪ್ಪತ್ತು ಶಾಸಕರನ್ನು ಸೆಳೆಯುತ್ತೇವೆ. ಆ ಮಟ್ಟದ ಸಂಪರ್ಕ, ಸಾಮರ್ಥ್ಯ ನಮಗೂ ಇದೆ. ಅಂತಹ ಹೊಲಸು ರಾಜಕೀಯ ಬೇಡ ಎಂದು ಸುಮ್ಮನಿದ್ದೇವೆ. ಆಪರೇಷನ್‌ ಕಮಲಕ್ಕೆ ಕೋಟಿ ಕೋಟಿ ಹಣ ಎಲ್ಲಿಯದೆಂಬುದನ್ನು ಚೌಕಿದಾರ ಹಾಗೂ ಸಾಮಂತ ಚೌಕಿದಾರರು ಸ್ಪಷ್ಟಪಡಿಸಲಿ’ ಹೀಗೆಂದು ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌.

Advertisement

“ಕಳೆದೊಂದು ವರ್ಷದಿಂದ ಬಿಜೆಪಿಯವರು ಆಡುತ್ತಿರುವ ಎಲ್ಲ ಆಟಗಳನ್ನು ನೋಡಿದ್ದೇವೆ. ಅವರ ಆಟಕ್ಕೆ ಪ್ರತಿ ಆಟದ ಎದುರೇಟು ನೀಡಬಲ್ಲ ಕಲೆ ನಮಗೂ ಗೊತ್ತಿದೆ. ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ತಿಳಿಯುವುದು ಬೇಡ’ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಕುಂದಗೋಳ, ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಬಿಜೆಪಿ ನಾಯಕರಿಂದ ಆಕ್ಷೇಪಾರ್ಹ ಹೇಳಿಕೆ, ಸಮ್ಮಿಶ್ರ ಸರ್ಕಾರ ಅಸ್ಥಿರ ಯತ್ನ, ಲೋಕಸಭೆ ಚುನಾವಣೆ ಫ‌ಲಿತಾಂಶ ಇನ್ನಿತರ ವಿಷಯಗಳ ಕುರಿತಾಗಿ ದಿನೇಶ ಗುಂಡೂರಾವ್‌ ಅವರು “ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು.

* ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಲೇ ಬಂದಿದ್ದಾರೆ. ಪದೇಪದೆ ಮುಖಭಂಗ ಅನುಭವಿಸುತ್ತಿದ್ದಾರೆ. ಲೋಕಸಭೆ ಹಾಗೂ ಹಣದ ಆಮಿಷವೊಡ್ಡಿ ಡಾ| ಉಮೇಶ ಜಾಧವ ಒಬ್ಬರನ್ನು ಸೆಳೆದಿದ್ದಾರಷ್ಟೆ. ಮಾತೆತ್ತಿದರೆ ಬಿಜೆಪಿ ನಾಯಕರು ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುತ್ತಾರೆ. ಅವರಿಗೆ ಗೊತ್ತಿರಲಿ, ನಮಗೂ ಬಿಜೆಪಿ ಶಾಸಕರ ಸಂಪರ್ಕ ಇದೆ.

* ಬಿಜೆಪಿ ನಾಯಕರು ಶಾಸಕರನ್ನು ಸೆಳೆಯಲು 200-300 ಕೋಟಿ ರೂ. ಸುರಿಯಲು ಮುಂದಾಗಿದ್ದಾರೆ. ಈ ಹಣ ಎಲ್ಲಿಂದ ಬಂತು? ಕಪ್ಪುಹಣ, ಭ್ರಷ್ಟಾಚಾರ ರಹಿತ ಆಡಳಿತ ಬಗ್ಗೆ ದೊಡ್ಡದಾಗಿ ಮಾತನಾಡುವ, ದೇಶಕ್ಕೆ ನಾನೇ ಚೌಕಿದಾರ ಎನ್ನುವ ಪ್ರಧಾನಿ ಮೋದಿ ಹಾಗೂ ಸಾಮಂತ ಚೌಕಿದಾರರೆಂಬಂತೆ ಫೋಸ್‌ ಕೊಡುವ ರಾಜ್ಯ ಬಿಜೆಪಿ ನಾಯಕರು ಇಷ್ಟೊಂದು ಹಣ ಎಲ್ಲಿಂದ‌ ಬಂತು ಎಂಬುದನ್ನು ಸ್ಪಷ್ಟಪಡಿಸಲಿ.

* “ಭ್ರಷ್ಟಾಚಾರಿಯಾಗಿ ರಾಜೀವ್‌ ಗಾಂಧಿ ಸಾವನ್ನಪ್ಪಿದರು, ನಮ್ಮ ಶಾಪದಿಂದಲೇ ಸಿದ್ದರಾಮಯ್ಯ ಅವರಿಗೆ ಪುತ್ರ ಅಗಲಿಕೆ ಶೋಕ ಬಂತು, ಕಾಂಗ್ರೆಸ್‌ ಹಾಗೂ ಸಮ್ಮಿಶ್ರ ಸರ್ಕಾರದ ಕಿರುಕುಳದಿಂದಲೇ ಸಿ.ಎಸ್‌.ಶಿವಳ್ಳಿ ಮೃತರಾದರು’ ಎಂಬಂತಹ ಕೀಳುಮಟ್ಟದ ಹೇಳಿಕೆಗಳು ಬರತೊಡಗಿವೆ. ಇದು ಬಿಜೆಪಿಯವರ ವಿಕೃತ ಹಾಗೂ ಹತಾಶೆ ಮನೋಭಾವನೆಯಲ್ಲದೆ ಮತ್ತಿನ್ನೇನು?

Advertisement

* ಮೇ 23ರ ನಂತರ ಸಮ್ಮಿಶ್ರ ಸರ್ಕಾರ ಇನ್ನಷ್ಟು ಗಟ್ಟಿಗೊಂಡು, ಬಿಜೆಪಿಗೆ ದೊಡ್ಡ ನಿರಾಸೆ ಕಾದಿದೆ. ರಾಷ್ಟ್ರಮಟ್ಟದಲ್ಲೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಸೇರಿ ಹಲವು ಭಾವನಾತ್ಮಕ ವಿಷಯಗಳ ಮೂಲಕ ಯುವಕರನ್ನು ಸೆಳೆಯುವ ಯತ್ನದಿಂದಲೇ ನಾವು ಗೆಲ್ಲುತ್ತೇವೆ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ.

ಉಪ ಚುನಾವಣೆ ಗೆಲುವು ನಮ್ಮದೇ: ಜಮಖಂಡಿ, ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷ ಗೆಲುವು ಸಾಧಿಸಿದೆ. ಬಳ್ಳಾರಿ ಲೋಕಸಭೆ ಉಪ ಚುನಾವಣೆಯನ್ನೂ ಗೆದ್ದಿದ್ದೇವೆ. ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಮೇ 13ರಂದು ಕುಂದಗೋಳದಲ್ಲಿ, 14ರಂದು ಚಿಂಚೋಳಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ರಮೇಶಗೆ ಪಕ್ಷ ಏನು ಅನ್ಯಾಯ ಮಾಡಿದೆ?: ರಮೇಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಏನೂ ಅನ್ಯಾಯ ಮಾಡಿಲ್ಲ. ಹಲವು ಅವಕಾಶಗಳನ್ನು ನೀಡಿದೆ. ಸಚಿವ ಸ್ಥಾನ ನೀಡಿದ್ದರೂ ಅವರು ಸಂಪುಟ ಸಭೆಗೆ ಬರಲಿಲ್ಲ, ಜಿಲ್ಲಾ ಪ್ರಗತಿ ಪರಿಶೀಲನೆ ಸಮರ್ಪಕವಾಗಿ ನಡೆಸಲಿಲ್ಲ, ಪಕ್ಷದಿಂದ ಯಾವುದೇ ಅನ್ಯಾಯವಂತೂ ಆಗಿಲ್ಲ. ಕೆಲ ವೈಯಕ್ತಿಕ ಕಾರಣಕ್ಕೆ ಅವರು ಅಸಮಾಧಾನಗೊಂಡಿರಬೇಕು. ಸಮ್ಮಿಶ್ರದಿನೇಶ್ ಗುಂಡೂರಾವ್‌, ಶಾಸಕರು, ಆಪರೇಷನ್‌ ಕಮಲ, Dinesh Gundoorao, Legislators, Operation BJPದಿನೇಶ್ ಗುಂಡೂರಾವ್‌, ಶಾಸಕರು, ಆಪರೇಷನ್‌ ಕಮಲ, Dinesh Gundoorao, Legislators, Operation BJP ಸರ್ಕಾರದಲ್ಲಿ ಹಳೇ ಮೈಸೂರು ಭಾಗದ ಕೆಲವು ಕಡೆ ಪಾಲುದಾರ ಪಕ್ಷಗಳ ನಡುವೆ ಕೆಲ ವ್ಯತ್ಯಾಸವಿದೆ. ಅದು ಬಿಟ್ಟರೆ ಎಲ್ಲೂ ಗೊಂದಲಗಳಿಲ್ಲ. ಮೇ 23ರಂದು ಹೊರ ಬರುವ ಫ‌ಲಿತಾಂಶ ಗೊಂದಲ-ವ್ಯತ್ಯಾಸಗಳಿಗೆ ತೆರೆ ಎಳೆಯಲಿದೆ.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next